Slide
Slide
Slide
previous arrow
next arrow

ಅಪ್ರಾಪ್ತ ಬಾಲಕಿ ಕಿಡ್ನ್ಯಾಪ್ ಪ್ರಕರಣ; ಮೂವರು ಆರೋಪಿತರ ಬಂಧನ

300x250 AD


ಶಿರಸಿ: ಅಪ್ರಾಪ್ತ ಬಾಲಕಿ ಕಿಡ್ನ್ಯಾಪ್ ಪ್ರಕರಣ ಸಂಬಂಧ ಬನವಾಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ಕುಪ್ಪಗಡ್ಡೆಯ ಸುನೀಲ ಸುರೇಶ್ ಬೋವಿವಡ್ಡರ, ಸರೋಜಾ ಸುರೇಶ, ಅಕ್ಕಿ ಆಲೂರಿನ ಜೈರಾಮ ಹಾಲಪ್ಪ ಹುರಳಿ ಬಂಧಿತ ಆರೋಪಿಗಳು. ನ.12 ರಂದು ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ಅಪಹರಣ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಬಾಲಕಿ ಅಪಹರಿಸಿ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಇದೀಗ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪಿಎಸ್‍ಐ ಹನುಮಂತ ಬಿರಾದಾರ ಒಳಗೊಂಡ ತಂಡ ರಚನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top