ಶಿರಸಿ: ಕೆಲವು ದಿನಗಳ ಹಿಂದೆ ಕೋಲಾರದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿ ಸಮಾಜ ಘಾತುಕ ಕೆಲಸ ಮಾಡಿ ಸಮಾಜದ ನೆಮ್ಮದಿಯನ್ನು ಹಾಳುಮಾಡಿ ಮತ್ತು ಸುತ್ತಮುತ್ತಲಿನ ಜನರಿಗೆ ಭಯದ ವಾತಾವರಣ ಮೂಡಿಸಿ ದುಷ್ಕ್ರತ್ಯ ಮೆರೆದಿದ್ದಾರೆ. ಅಂಥವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹಿಂದೂ ಮಹಾಸಭಾದ ಕಾರ್ಯಕರ್ತರು ಕರ್ನಾಟಕ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.
ನ.15 ರಂದು ಕೇರಳದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತನ ಹೆಂಡತಿಯ ಎದುರಿಗೇ ಬರ್ಬರ ಹತ್ಯೆಯನ್ನು ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಹಾಗೂ ಕೊಲೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಮಾಧ್ಯಮದವರ ಮುಖಾಂತರ ರಾಜ್ಯ ಪಾಲರಿಗೆ ಈ ಮನವಿ ನೀಡಿದ್ದಾರೆ. ಹಾಗೂ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೂಡಲೇ ನಿರ್ಗತಿಕರಿಗೆ ಬಡವರಿಗೆ ವಸತಿ ರಹಿತರಿಗೆ ಪ್ರಧಾನ ಮಂತ್ರಿಗಳು 2022 ಕ್ಕೆ ಗುಡಿಸಲು ಮುಕ್ತ ದೇಶ ಹಾಗೂ ವಸತಿರಹಿತರಿಗೆ ವಸತಿ ಕಲ್ಪಿಸಿಕೊಡುತ್ತೇವೆಂದು ಸಾರ್ವಜನಿಕರಿಗೆ ಮಾತು ಕೊಟ್ಟಿರುತ್ತಾರೆ. ಅದರಂತೆ ತಾವುಗಳು ಪ್ರಧಾನ ಮಂತ್ರಿಗಳ ಆದೇಶದಂತೆ ಕೂಡಲೇ ವಸತಿಯನ್ನು ಕಲ್ಪಿಸಿ ಕೊಡಬೇಕೆಂದು ಹಿಂದೂ ಮಹಾಸಭಾದಿಂದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.