Slide
Slide
Slide
previous arrow
next arrow

ಅನಧಿಕೃತ ಚಿಕಿತ್ಸಾ ಕೇಂದ್ರದ ಮೇಲೆ ವೈದ್ಯಾಧಿಕಾರಿ ದಾಳಿ; ಆಸ್ಪತ್ರೆ ಸೀಜ್

300x250 AD

ಜೊಯಿಡಾ: ಮುರ್ಕವಾಡ ಮತ್ತು ಬೆಳವಟಿ ಗ್ರಾಮದಲ್ಲಿ ಪರವಾನಗಿ ಇಲ್ಲದೆ ನಡೆಸುತಿದ್ದ ಅನಧಿಕೃತ ಚಿಕಿತ್ಸಾ ಕೇಂದ್ರದ ಮೇಲೆ ವೈದ್ಯಾಧಿಕಾರಿಗಳು ದಾಳಿ ನಡೆಸಿ ನೋಟೀಸ್ ನೀಡಿದ್ದಾರೆ.


ವೈದ್ಯಾಧಿಕಾರಿ ಡಾ.ಬಿ.ಎಸ್. ಸಿನ್ನೂರ ದಾಳಿ ನಡೆಸಿ, ಮುರ್ಕವಾಡದಲ್ಲಿ ಶರಣಬಸವ ಧಾರವಾಡಕರ ಹಾಗೂ ಬೆಳವಟಿಗಿ ಗ್ರಾಮದಲ್ಲಿ ಸಂಜು ಮಾಳವಿ ಅವರು ನಡೆಸುತ್ತಿದ್ದ ಅನಧಿಕೃತ ಆಸ್ಪತ್ರೆಯನ್ನು ಸೀಸ್ ಮಾಡಿದ್ದಾರೆ. ಇವರು ಯಾವುದೇ ಪದವಿ ಪಡೆಯದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೇ ಭಾರೀ ಪ್ರಮಾಣದ ಔಷಧಗಳನ್ನು ಸಹಾ ನೀಡುತಿದ್ದರು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ.

300x250 AD


ಈ ಕುರಿತು ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ. ಬಿ.ಏಸ್ ಶಿನ್ನೂರು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಅನಧಿಕೃತ ಕ್ಲಿನಿಕ್ ಗಳನ್ನು ಮುಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.


ಈ ವೇಳೆ ವೈದ್ಯಾಧಿಕಾರಿ ಡಾ. ಶ್ರೀಕಾಂತ ಯಲ್ಲಿಗಾರ, ಗ್ರಾಮಲೆಕ್ಕಾಧಿಕಾರಿ ರಾಮಣ್ಣ ಮೇತ್ರಿ, ಸಿಬ್ಬಂದಿ ವಸಂತ ತಲದಪ್ಪಣ್ಣವರ ಇತರರು ಇದ್ದರು.

Share This
300x250 AD
300x250 AD
300x250 AD
Back to top