ಯಲ್ಲಾಪುರ: ಹುಬ್ಬಳ್ಳಿಯ ಜ್ಯೋತಿರ್ವಿಜ್ಞಾನ ಸಂಸ್ಥೆಯವರು, ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯಿತಿಯ ಅರಳಿಮಕ್ಕಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನ.21 ರಂದು ಬೆಳಿಗ್ಗೆ 9 ಗಂಟೆಗೆ ದಿ. ಶಿವರಾಮ ಹೆಗಡೆ ಕಂಪ್ಲಿ ಇವರ ಜನ್ಮ ಸ್ಮರಣೋತ್ಸವ ಹಾಗೂ ಜ್ಯೋತಿಷ್ಯ ವಿಚಾರಗೋಷ್ಠಿ ಹಮ್ಮಿಕೊಂಡಿದ್ದಾರೆ.
ಸೋಂದಾ ಸ್ವರ್ಣವಲ್ಲಿ ಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿಚಾರಗೋಷ್ಠಿ ಸಾನಿಧ್ಯ ಆಶಿರ್ವಚನ ನೀಡಲಿದ್ದಾರೆ. ಜಿ ಎಂ ಹೆಗಡೆ ಹಿರೇಸರ ಅವರ ಅಧ್ಯಕ್ಷತೆಯಲ್ಲಿ, ಜ್ಯೋತಿಷ್ಯ ಆಚಾರ್ಯ ವಿದ್ವಾನ್ ನಾಗೇಂದ್ರ ಅನಂತ ಭಟ್ಟ ಹಿತ್ಲಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ವಂಶವೃಕ್ಷ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಅತಿಥಿಗಳಾಗಿ ಹಾಸಣಗಿ ಸೊಸೈಟಿಯ ಆರ್ ಎನ್ ಹೆಗಡೆ ಗೋರ್ಸಗದ್ದೆ, ಎಂ ಜಿ ಭಟ್ ಸಂಕದಗುಂಡಿ, ಧಾರವಾಡದ ಶ್ರೀಕಾಂತ ಮಂಗಸೂಳಿ, ಎಂ ಜಿ ಹೆಗಡೆ ಕುಂದರಗಿ, ಶ್ರೀಪಾದ ಹೆಗಡೆ ಶಿರನಾಲ, ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಗಜಾನನ ಹೆಗಡೆ, ಯಲ್ಲಾಪುರದ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2 ರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು, 3 ಗಂಟೆಯ ನಂತರ ನಡೆಯುವ ಜ್ಯೋತಿಷ್ಯ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಜ್ಯೋತಿರ್ವಿಜ್ಞಾನ ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಗಣೇಶ್ ಹೆಗಡೆ ಕಂಪ್ಲಿ ವಹಿಸಲಿದ್ದಾರೆ. ಆರೋಗ್ಯ ಜ್ಯೋತಿಷ್ಯ ಉಪನ್ಯಾಸಕರಾಗಿ ಡಾ.ಎ.ಕೆ ಹಂದಿಗೋಳ ಧಾರವಾಡ, ಪರಿಹಾರ ಜ್ಯೋತಿಷ್ಯ ಉಪನ್ಯಾಸಕರಾಗಿ ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ನಿತ್ಯಜೀವನದಲ್ಲಿ ಜ್ಯೋತಿಷ್ಯ ಡಾ.ನಾಗೇಶ ಭಟ್ಟ ಉಮ್ಮಚಗಿ, ವಾಸ್ತುಶಾಸ್ತ್ರದ ವಾಸ್ತವಗಳು ಸುರೇಶ ಕೊಪ್ಪರ್ ಹಾಗೂ ಮನೆ ಮದ್ದು ಡಾ.ಪತಂಜಲಿ ವಿ. ಹೆಗಡೆ ಕಲಕೊಪ್ಪ ಉಪನ್ಯಾಸ ನೀಡಲಿದ್ದಾರೆ. ಎಂದು ಜ್ಯೋತಿರ್ವಿಜ್ಞಾನ ಸಂಸ್ಥೆಯ ಕಾರ್ಯದರ್ಶಿ ಡಾ.ಪವನ ಜೋಶಿ ತಿಳಿಸಿದ್ದಾರೆ