• Slide
    Slide
    Slide
    previous arrow
    next arrow
  • ಜೆ.ಆರ್.ಎಫ್. ಪರಿಕ್ಷಾ ಫಲಿತಾಂಶದಲ್ಲಿ ಪವಿತ್ರಮಾತಾ ಭಟ್ ಸಾಧನೆ

    300x250 AD


    ಯಲ್ಲಾಪುರ: ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ದೇಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‌ನವರು (ಐ.ಸಿ.ಎ.ಆರ್.) ನಡೆಸಿದ ರಾಷ್ಟ್ರ ಮಟ್ಟದ ಜೆ.ಆರ್.ಎಫ್. ಪರಿಕ್ಷಾ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗಿದ್ದು, ಈ ಫಲಿತಾಂಶದಲ್ಲಿ ಯಲ್ಲಾಪುರ ಪಟ್ಟಣದ ಪವಿತ್ರಮಾತಾ ಭಟ್ ಅವರು ದೇಶಮಟ್ಟದಲ್ಲಿ ೩೨ ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಸಸ್ಯ ವಿಜ್ಞಾನ (ಪ್ಲಾಂಟ್ ಸೈನ್ಸ್) ವಿಭಾಗದಲ್ಲಿ ಇವರಿಗೆ ಈ ರ‍್ಯಾಂಕ್ ದೊರೆತಿದೆ. ದೇಶದ ವಿವಿದೆಡೆಯ ೩೦ ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಈ ಪರಿಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪವಿತ್ರಮಾತಾ ಭಟ್ ಅವರು ಪ್ರಸಕ್ತ ಸಾಲಿನಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಅಗ್ರಿ ಪದವಿ ಪೂರೈಸಿದ್ದಾರೆ. ಇವರು ಯಲ್ಲಾಪುರದ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಹಾಗೂ ಲಲಿತಾ ಭಟ್ ದಂಪತಿಯ ಪುತ್ರಿ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top