ಭಟ್ಕಳ: ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ದೇವಾಡಿಗ ಸಮಾಜದ ಮಕ್ಕಳು ಸೂಕ್ತ ಮಾಹಿತಿಯನ್ನು ತಿಳಿದುಕೊಳ್ಳಿರಿ. ಮತ್ತು ಪರೀಕ್ಷೆ ಎದುರಿಸುವಲ್ಲಿ ಅದಕ್ಕೆ ಬೇಕಾದ ರೀತಿಯ ಪೂರ್ವ ತರಬೇತಿಯನ್ನು ಉತ್ತಮವಾಗಿ ಪಡೆದು ಅಭ್ಯಾಸ ಮಾಡಿದರೆ ಉನ್ನತ ಮಟ್ಟದ ಹುದ್ದೆಗೆ ಏರಬಹುದು ಎಂದು ವಲಯ ಅರಣ್ಯಾಧಿಕಾರಿ ಮಹೇಶ ಎಂ. ದೇವಾಡಿಗ ಹೇಳಿದರು.
ಅವರು ಬೆಂಗ್ರೆ ಯಕ್ಷೆಮನೆ ದೇವಾಡಿಗ ಸಭಾ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರರ ಸಂಘದ 2020-21ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ, ನಿವೃತ್ತರಿಗೆ ಸನ್ಮಾನ ಹಾಗೂ ನೌಕರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಂಘದಿಂದ ಸಹಾಯ ಪಡೆದವರು ಸಹ ಮುಂದೆ ತಾವು ಉನ್ನತ ಸ್ಥಾನವನ್ನು ಪಡೆದು ಆರ್ಥಿಕವಾಗಿ ಸದೃಢರಾದಾಗ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಂಜುನಾಥ ಕನ್ನಯ್ಯ ದೇವಾಡಿಗ ಗೋವಾ, ಕೃಷ್ಣ ಎಂ. ಭಂಡಾರಿ, ಸುಬ್ರಾಯ ದೇವಾಡಿಗ, ಬಿ.ಎಸ್.ಉಮಾನಂದ ಕುಮಟಾ, ಶೈಲಾ ಕುಮಟಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರರ ಸಂಘದ ಅಧ್ಯಕ್ಷ ನಾರಾಯಣ ಎಂ. ದೇವಾಡಿಗ ವಹಿಸಿದ್ದರು. ಮಾರುತಿ ದೇವಾಡಿಗ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಪದ್ಮಯ್ಯ ದೇವಾಡಿಗ ವರದಿ ವಾಚಿಸಿದರು. ವೆಂಕಟೇಶ ದೇವಾಡಿಗ ವಂದಿಸಿದರು. ಶಿಕ್ಷಕಿ ಆಶಾ ದೇವಾಡಿಗ ಹಾಗೂ ಕೃಷ್ಣ ದೇವಾಡಿಗ ನಿರೂಪಿಸಿದರು.