ಅಂಕೋಲಾ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಹೊಸಾಕಂಬಿ ಮತ್ತು ವಜ್ರಳ್ಳಿ ಭಾಗದಲ್ಲಿ ನಡೆದಿದೆ.
ಎರಡು ಟಿಪ್ಪರ್ ಲಾರಿ ಮತ್ತು ಎರಡು ಲಘು ವಾಹನಗಳಲ್ಲಿ ಅಕ್ರಮ ಮರಳು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿ.ಪಿ.ಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರವೀಣಕುಮಾರ ನೇತೃತ್ವದ ತಂಡ ದಾಳಿ ನಡೆಸಿ ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪ್ರೊಬೆಶನರಿ ಪಿ.ಎಸ್.ಐ ಮುಶಾಹಿದ ಅಹಮದ್, ಸಿಬ್ಬಂದಿಗಳಾದ ಆಸಿಫ್ ಕುಂಕೂರ, ಮಂಜುನಾಥ ಲಕ್ಮಾಪುರ, ಶ್ರೀಕಾಂತ ಮತ್ತು ಭಗವಾನ ಇದ್ದರು.