ಕಾರವಾರ: ಇಲ್ಲಿನ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೂ ಮೊದಲು ಕೈ ತೊಳೆಯುವ ಸೌಲಭ್ಯ ಇಲ್ಲದಿರುವುದನ್ನು ಅರಿತ ಕಾರವಾರ ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರುಗಳೆಲ್ಲ ಸೇರಿ 15 ಸಾವಿರ ರೂ. ಬೆಲೆ ಬಾಳುವ ಕೈ ತೊಳೆಯುವ ಘಟಕವನ್ನು ನೀಡಿದ್ದಾರೆ.
ರೋಟರಿ ಕ್ಲಬ್‍ನ ಅಧ್ಯಕ್ಷ ನರೇಂದ್ರ ದೇಸಾಯಿ ಮಾತನಾಡಿ, ನಮ್ಮ ಕಾಲದಲ್ಲಿ ಬಡತನವಿತ್ತು, ಆದ್ದರಿಂದ ಶಿಕ್ಷಣ ದೊರಕಿಲ್ಲ. ಆದ್ದರಿಂದ ತಾವು ಶಿಕ್ಷಣಕ್ಕಾಗಿ ಮಕ್ಕಳಿಗೆ ಸಹಾಯ ಮಾಡುವ ಯೋಜನೆಯನ್ನು ರೂಪಿಸಿರುವುದಾಗಿ ತಿಳಿಸಿದರು.
ದಾನಿಗಳಾದ ನರೇಂದ್ರ ದೇಸಾಯಿ, ಪ್ರದೀಪ ನಾಯ್ಕ, ಮುರಳಿ ಗೋವೆಕರ ಹಾಗೂ ಎಂ.ಪಿ ಕಾಮತ ಮಾತನಾಡಿ, ತಮಗೆ ಇಂತಹ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಎಲ್.ಎಸ್ ಫರ್ನಾಂಡಿಸ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾರಂಭದಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಮಾಲಿನಿ ನಾಯಕ ಸ್ವಾಗತಿಸುತ್ತ ಈ ಶಾಲೆಗೆ ಬಹುತೇಕ ಬಡ ಹಾಗೂ ಸಾಂತ್ವನ ಕೇಂದ್ರದ ಮಕ್ಕಳು ಬರುತ್ತಿದ್ದು, ರೋಟರಿಯವರಂಥಹ ಸಂಘ ಸಂಸ್ಥೆಗಳ ಸಹಾಯ ಹಸ್ತ ಬೇಕಿದೆ ಎಂದರು.
ರೋಟೇರಿಯನ್ ಮೋಹನ ನಾಯ್ಕ, ಪ್ರದೀಪ ನಾಯ್ಕ, ಮುರಲಿ ಗೋವೆಕರ, ಎಂ.ಪಿ ಕಾಮತ, ರಾಘವೇಂದ್ರ ಪ್ರಭು, ಅನಮೋಲ ರೇವಣಕರ, ಎಂ.ಎ ಕಿತ್ತೂರ, ಸಾತಪ್ಪಾ ತಾಂಡೇಲ, ಮನೋಹರ ಕಾಂಬ್ಳಿ, ಚೇತನಾ ಪ್ರದೀಪ ನಾಯ್ಕ, ಭಾರತಿ ಶ್ಯಾಮ ಸೈಲ್ ಹಾಗೂ ಶಿಕ್ಷಕಿ ಸುಮಂಗಲಾ ಹೆಗಡೆ ಉಪಸ್ಥಿತರಿದ್ದರು. ಶಿಕ್ಷಕಿ ಉಜ್ವಲಾ ಗುರವ ನಿರೂಪಿಸಿ, ವಂದಿಸಿದರು.