ಶಿರಸಿ: ಶಿಕ್ಷಕರೊಬ್ಬರು 1000 ಕಿಮಿ ಬೈಕ್ ಮೂಲಕ ತೆರಳಿ ಭಾರತೀಯ ಸೈನಿಕರ ಕಲ್ಯಾಣ ನಿಧಿ ಜಾಗೃತಿ ಅಭಿಯಾನ ನಡೆಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಮೆಚ್ಚುಗೆ ಗಳಿಸಿದ್ದಾರೆ. ನ ಸುಪ್ರಸನ್ನ ನಗರದ ನಿವಾಸಿ ಆಗಿರುವ ಆದಿತ್ಯಶಂಕರ ಜಿಎ, ಮೂಲತಃ ನಿಟ್ಟೂರಿನ ಗೌರಿಕೆರೆಯವರಾಗಿದ್ದು ಉಮ್ಮಚಗಿ ಬಳಿಯ ಪ್ರಗತಿ ವಿದ್ಯಾಲಯ ಭರತನಳ್ಳಿ ಪ್ರೌಢಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂಥಹ ಸಾಮಾಜಿಕ ಸಹಾಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು . ಸೈನಿಕರ ಕಲ್ಯಾಣ ನಿಧಿಗೆ ಪ್ರತಿ ವರ್ಷವೂ ತಾವೂ ಸಹಾಯ ಮಾಡುತ್ತ ಉಳಿದವರಿಗೂ ಸಹಾಯ ಮಾಡಲು ಪ್ರೇರೇಪಿಸುತ್ತಾ ಬಂದಿದ್ದಾರೆ. ತಮ್ಮ ಬೈಕ್ ಮೂಲಕ ಕಳೆದ ಕೆಲ ವರ್ಷಗಳಿಂದ ಒಂದೊAದು ಪ್ರದೇಶಗಳಿಗೆ ತೆರಳಿ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಈ ಬಾರಿ ಶಿರಸಿಯಿಂದ ಕಳಸ, ಹೊರನಾಡು, ಚಿಕ್ಕಮಗಳೂರು, ಹಾಸನ ಶ್ರವಣ ಬೆಳಗೊಳ ಬಾಬಾಬುಡನಗಿರಿ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಸೈನಿಕರಿಗೆ ಸಹಾಯ ಮಾಡುವಂತೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಮಾಜ ಹಾಗೂ ದೇಶದ ರಕ್ಷಣೆಗೆ ಸೈನಿಕರು ಮಾಡುವ ಕಾರ್ಯದ ಮುಂದೆ ನಾವು ಅವರಿಗಾಗಿ ಮಾಡುವ ಸಹಾಯ ಕಿಂಚಿತ್ತೂ ಸಾಲದು ಎನ್ನುವ ಶಿಕ್ಷಕ ಆದಿತ್ಯಶಂಕರ, ಸೈನಿಕರ ಸಹಾಯಕ್ಕಾಗಿ ಕರ್ನಾಟದ ಎಲ್ಲ ಕಡೆಗಳಿಗೆ ತೆರಳಿ ಸೈನಿಕರ ಕಲ್ಯಾಣ ನಿಧಿಗೆ ಹೆಚ್ಚಿನ ನೆರವು ನೀಡುವಂತೆ ಪ್ರೇರೆಪಿಲಾಗುತ್ತಿದೆ. ಈ ಜೊತೆಗೆ ಸೈನಿಕ ಕಲ್ಯಾಣ ನಿಧಿಯ ಅಕೌಂಟ್ ವಿವರ ಇರುವ ಕರ ಪತ್ರ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಏಕೆಂದರೆ ಯಾವುದೇ ದೇಣಿಕೆ ನೀಡಿದರೂ ಅದು ನೇರವಾಗಿ ಸೈನಿಕರ ಕಲ್ಯಾಣ ನಿಧಿಗೆ ಸೇರಬೇಕು ಎನ್ನುವ ಉದ್ದೇಶದಿಂದ ಧನ ಸಹಾಯ ಮಾಡುವವರು ನೇರವಾಗಿ ಅವರ ಖಾತೆಗೆ ಹಾಕಲಿ ಎನ್ನುವ ಪಾರದರ್ಶಕ ಉದ್ದೇಶ ಹೊಂದಿರುವುದಾಗಿ ಹೇಳುತ್ತಾರೆ.
ಸೈನಿಕರ ಸೇವೆ ಎಲ್ಲಕ್ಕಿಂತ ಮಿಗಿಲು. ದೇಶ ರಕ್ಷಣೆಗೆ ಪ್ರಾಣತ್ಯಾಗಕ್ಕೂ ಸಿದ್ಧಹಸ್ತರು. ಸೈನಿಕರ ಅಮೋಘ ಕಾರ್ಯಕ್ಕೆ ಸಹಾಯಹಸ್ತ ಚಾಚುವವರಿಗೆ ಸೇತುವೆಯಾಗಿ ಈ ಜಾಗೃತಿ ಮಾಡುತ್ತಿದ್ದೇನೆ ಎನ್ನುವ ಅವರು, ಸೈನಿಕರ ಕಲ್ಯಾಣ ನಿಧಿಯ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಆದಿತ್ಯ.