ಯಲ್ಲಾಪುರ: ರಂಗ ಸಮೂಹ ಮಂಚೀಕೇರಿ ಇವರ ಆಶ್ರಯದಲ್ಲಿ ರಂಗ ಪ್ರದರ್ಶನ ‘ಕಾಲ ಚಕ್ರ’ ನಾಟಕ ಪ್ರದರ್ಶನ ನ. 17 ರಿಂದ 20 ರ ವರೆಗೆ ನಡೆಯಲಿದೆ. ಮಂಚಿಕೇರಿ ಸಮೀಪದ ಜೋಗಭಟ್ರಕೇರಿಯ ‘ನಂದನಂ’ ಜಿ. ಎನ್. ಶಾಸ್ತ್ರಿ ಮನೆಯಲ್ಲಿ ಪ್ರತಿದಿನ ಸಂಜೆ ನಡೆಯಲಿದೆ.
ನಾಟಕದ ರಚನೆಯ ಮೂಲ ಮರಾಠಿಯ ಜೈವಂತ ದಳ್ವಿಯವರಾಗಿದ್ದು, ಕನ್ನಡಕ್ಕೆ ಎಚ್. ಕೆ. ಕರ್ಕೆರಾ ಅನುವಾದಿಸಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಹುಲುಗಪ್ಪ ಕಟ್ಟಿಮನಿ ಮಾಡಲಿದ್ದು, ಸಹ ನಿರ್ದೇಶನ ಸಾಲಿಯಾನ್ ಉಮೇಶ ನಾರಾಯಣ ಮಾಡುವರು.
ನಾಟಕದ ಪಾತ್ರಧಾರಿಗಳಾಗಿ ರಂಗ ನಿರ್ದೇಶಕ ಎಮ್ ಕೆ ಭಟ್ಟ ಯಡಳ್ಳಿ, ಆರ್ ಎನ್ ಭಟ್ಟ ದುಂಡಿ, ಯಕ್ಷಗಾನ ಕಲಾವಿದೆ ನಿರ್ಮಲಾ ಗೋಳಿಕೊಪ್ಪ, ಪ್ರಕಾಶ ಭಟ್ಟ ಸೇರಿದಂತೆ ಇನ್ನಿತರ ಕಲಾವಿದರು ಜೊತೆಯಾಗಲಿದ್ದಾರೆ. ಆಸಕ್ತರು ಆಗಮಿಸಲು ಕೋರಿದೆ.