• Slide
    Slide
    Slide
    previous arrow
    next arrow
  • ನ.22ಕ್ಕೆ ಯಕ್ಷ- ಗಾನ- ನಾಟ್ಯ- ತಾಳಮದ್ದಲೆ ಕಾರ್ಯಕ್ರಮ

    300x250 AD


    ಅಂಕೋಲಾ: ಅಂಕೋಲಾ ಕರ್ನಾಟಕ ಸಂಘದ ಆಶ್ರಯದಲ್ಲಿ ನ.22 ರಂದು ಸಂಜೆ 5.30ಕ್ಕೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಅಪರೂಪದ ಕಲಾ ಸಂಗಮದ ಯಕ್ಷ, ಗಾನ, ನಾಟ್ಯ, ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಸಂಘದ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಂಘದ ಹಿರಿಯ ಸದಸ್ಯ ಕೇ.ವಿ.ನಾಯಕ ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು ಅಪೂರ್ವ ಕಲಾವಿದರ ಸಂಗಮವಾಗಲಿದೆ. ಕಾರ್ಯಕ್ರಮದಲ್ಲಿ ಮದ್ದಳೆಯ ಮಾಂತ್ರಿಕ ಶಂಕರ ಭಾಗವತ, ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ, ಗಾನವೈಭವದಲ್ಲಿ ಹೊನ್ನಾವರ ಮಾಳ್ಕೋಡದ ಚಿಂತನಾ ಹೆಗಡೆ, ನಾಟ್ಯರಂಗದಲ್ಲಿ ಸಾಲಿಗ್ರಾಮ ಮೇಳದ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರ, ಸ್ತ್ರೀ ಪಾತ್ರದಲ್ಲಿ ಹನುಮಗಿರಿ ಮೇಳದ ರಕ್ಷಿತ ಶೆಟ್ಟಿ ಪಡ್ರೆ, ಪುರುಷ ಪಾತ್ರದಲ್ಲಿ ಯಕ್ಷ ಅಭಿಜಾತೆ ಅಶ್ವಿನಿ ಕೊಂಡದಕುಳಿ ಮಿಂಚಲಿದ್ದು ವಿಶೇಷವಾಗಿ ಪ್ರೊ.ಕೆ.ವಿ.ನಾಯಕ ಮತ್ತುರಾಜೇಶ ನಾಯಕಇವರಿಂದ ತಾಳಮದ್ದಲೆ ಕಾರ್ಯಕ್ರಮ ನಡೆಲಿದೆ ಎಂದರು.

    300x250 AD

    ಸುದ್ದಿಗೋಷ್ಠಿಯಲ್ಲಿಕರ್ನಾಟಕ ಸಂಘದ ಅಧ್ಯಕ್ಷ ಪ್ರಭಾಕರ ಬಂಟ, ಉಪಾಧ್ಯಕ್ಷ ವಿಠ್ಠಲದಾಸಕಾಮತ, ಸಹಕಾರ್ಯದರ್ಶಿ ಪ್ರಕಾಶಕುಂಜಿ, ಕಾರ್ಯಕ್ರಮ ಸಂಯೋಜಕರಾಜೇಶ ನಾಯಕ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top