ಅಂಕೋಲಾ: ಇಲ್ಲಿನ ಶ್ರೀ ಶಾಂತಾದುರ್ಗಾ ದೇವಸ್ಥಾನದ ಸಾಂಪ್ರದಾಯಿಕ ಆಚರಣೆಗಳಲ್ಲೊಂದಾದ ಕಾರ್ತಿಕಾರ್ತಿಕೋತ್ಸವದ ಶ್ರೀ ದೇವರ ವನವಿಹಾರಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
ಐ.ಆರ್.ಬಿ ಕಂಪನಿಯು ಕಾರ್ತಿಕೋತ್ಸವದ ವನಭೋಜನ ಸ್ಥಳದಲ್ಲಿ ದಾರಿ ಬಂದ್ ಮಾಡಿದ್ದರಿಂದಾಗಿ ದೇವರನ್ನು ಒಯ್ಯಲು ದಾರಿ ಇಲ್ಲದೇ ಸಮಸ್ಯೆಯಾಗಿತ್ತು. ಮಂಗಳವಾರ ಶ್ರೀ ಶಾಂತಾದುರ್ಗಾ ದೇವಸ್ಥಾನ ಆಡಳಿತ ಮಂಡಳಿಯವರು ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿದ್ದಾರೆ. ವನಭೋಜನಕ್ಕೆ ತೆರಳುವ ದಾರಿಯಲ್ಲಿ ಐ.ಆರ್.ಬಿ ಕಂಪನಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆಯನ್ನು ಹತ್ತು ಅಡಿಯಷ್ಟು ಎತ್ತರಿಸಿದ್ದರಿಂದ ದೇವರ ಪಲ್ಲಕ್ಕಿ ಸಾಗುವ ದಾರಿ ಬಂದ್ ಆಗಿತ್ತು. ದೊಡ್ಡದೊಡ್ಡ ಕಲ್ಲುಗಳು ಮತ್ತು ಮಣ್ಣು ಸುರುವಿದ್ದರಿಂದ ಈ ದಾರಿಯಲ್ಲಿ ಇಳಿದು ಹೋಗಲೂ ಸಾಧ್ಯವಿರಲಿಲ್ಲ. ಮುಂದಿನ ವಾರ ಕಾರ್ತಿಕೋತ್ಸವ ಇರುವುದರಿಂದ ಶ್ರೀ ಶಾಂತಾದುರ್ಗಾ ದೇವಸ್ಥಾನದ ಕಮೀಟಿ ವತಿಯಿಂದ ಜೆಸಿಬಿ ಬಳಸಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದ್ದು, ಖಾಯಂರಸ್ತೆ ಮತ್ತು ಮೆಟ್ಟಿಲುಗಳ ವ್ಯವಸ್ಥೆಯಾಗ ಬೇಕಿದೆ.
ಸ್ಥಳದಲ್ಲಿ ದೇವಸ್ಥಾನದ ಟ್ರಸ್ಟಿ ಅಶೋಕ ಮಹಾಲೆ, ಭಾಸ್ಕರ ನಾರ್ವೇಕರ ಹಾಗೂ ಸುರೇಶ ವೆರ್ಣೇಕರಇದ್ದರು.