ಕುಮಟಾ: ವ್ಯಕ್ತಿಯೋರ್ವ ರೈಲಿಗೆ ತಲೆಯೊಡ್ಡಿ ಸಾವನ್ನಪ್ಪಿದ ಘಟನೆ ಪಟ್ಟಣದ ಗುಡಾಳದ ರೈಲ್ವೇ ಹಳಿಯ ಬಳಿ ಮಂಗಳವಾರ ಸಂಭವಿಸಿದೆ.
ತಾಲೂಕಿನ ಮೂರೂರಿನ ಅಳವಳ್ಳಿಯ ನಿವಾಸಿ ಶ್ರೀಕಾಂತ ವೆಂಕಟರಮಣ ಭಟ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈತನು ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದು, ಯಾವುದೋ ವಿಷಯವನ್ನು ಮನಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ರೈಲು ಬಡಿದ ರಭಸಕ್ಕೆ ದೇಹ ಛಿದ್ರಗೊಂಡಿದೆ.
ಈ ಕುರಿತು ಕುಮಟಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.