ಶಿರಸಿ: ದಿ ತೋಟಗಾರ್ಸಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಸುಪರ್ ಮಾರ್ಕೆಟ್‍ನಲ್ಲಿ ನವರಾತ್ರಿಯಿಂದ ದೀಪಾವಳಿ ವರೆಗಿನ ರೂ.2,000 ಮೇಲ್ಪಟ್ಟ ಖರೀದಿಗಳ ಮೇಲಿನ ಖರೀದಿ ಬಿಲ್‍ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮ ನ.15 ರಂದು ಆಯೋಜಿಸಲಾಗಿತ್ತು.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಾಗೂ ಮುಂಡಗೋಡ ಶಾಖೆಗಳಲ್ಲಿ ಖರೀದಿ ಬಿಲ್‍ಗಳನ್ನು ಸೇರಿಸಿ ಲಕ್ಕಿ ಡ್ರಾ ಮಾಡುವ ಮೂಲಕವಾಗಿ 250ಕ್ಕೂ ಹೆಚ್ಚಿನ ಅದೃಷ್ಠ ಶಾಲಿಗಳನ್ನು ಆಯ್ಕೆ ಮಾಡಲಾಯಿತು. ಈ ರೀತಿ ಆಯ್ಕೆ ಮಾಡಿದ ಅದೃಷ್ಠ ಶಾಲಿಗಳಲ್ಲಿ ಮೊದಲನೇ ಬಹುಮಾನ ಎಲ್.ಜಿ.ಡಬಲ್ ಡೋರ್ ಪ್ರಿಜ್ ವಿಜೇತರಾಗಿ ಲಕ್ಷ್ಮಣ ಟಿ. ಗೌಡ ವಟ್ಲಕೈ, ಎರಡನೇ ಬಹುಮಾನ ಬೆಳ್ಳಿ ದೀಪ ವಿಜೇತರುಗಳಾಗಿ ಅನಂತ ಜಿ. ಹೆಗಡೆ ಬೊಮ್ನಳ್ಳಿ, ಮತ್ತು ಸುಧಾಕರ ಕೆ.ಭಟ್ಟ ಕಲ್ಲೇಶ್ವರ ಮೂರನೇ ಬಹುಮಾನ ಆಯ್.ಎಫ್. ಬಿ. ಮೈಕ್ರೋ ಓವನ್ ವಿಜೇತರುಗಳಾಗಿ ನಾರಾಯಣ ಜಿ. ಹೆಗಡೆ ಜೋಗಭಟ್ರಕೇರಿ& ದತ್ತಾತ್ರೇಯ ಎಮ್. ಹೆಗಡೆ ಶಿಂಗನಮನೆ& ಮಧುಕರರಾಮ ಭಟ್ಟ ಹಲಸಿನಕೈ, ನಾಲ್ಕನೇ ಬಹುಮಾನ ಉಷಾ ಟೆಬಲ್ ಟಾಪ್ ಗ್ರೈಂಡರ್ ವಿಜೇತರುಗಳಾಗಿ ಪ್ರವೀಣ ಎಸ್. ಭಟ್ಟ ವಾಜಗಾರ& ರೇಖಾಗೊರೆ ಸೋಂದಾ& ಮಾಲತೇಶ ಕೆ. ಹೆಬ್ಬಾಳ ಸಹ್ಯಾದ್ರಿ ಕಾಲೋನಿ& ಮಹೇಶ ಪಿ. ಹೆಗಡೆ ಹೀನಗಾರ ಹಾಗೂ ಐದನೇ ಬಹುಮಾನ ಟ್ರ್ಯಾವಲಿಂಗ್ ಬ್ಯಾಗ್ ವಿಜೇತರುಗಳಾಗಿ ಕಿರಣ ನಾಯ್ಕ ಹೊನ್ನಜ್ಜಿ& ಸೀತಾರಾಮ ಪಿ.ನಾಯ್ಕ ಹೊಳೆಬೈಲ್ & ಮಹಾಮಾತೆ ಹೆಬ್ಬೈಲು ಶ್ರೀ ಪದ್ಮಾವತಿಯಮ್ಮ ದೇವಿ ದೇವಸ್ಥಾನ& ಗೋಪಾಲ ಆರ್. ಹೆಗಡೆ ಹುಲಿಮನೆ & ಜಫರುಲ್ಲಾಖಾನ್‍ಖಾದರ್‍ಖಾನ್‍ಕಸ್ತೂರ ಬಾ ನಗರ ಇವರುಗಳು ಆಯ್ಕೆಯಾಗಿದ್ದಾರೆ. ಈ ಎಲ್ಲಾ ಬಹುಮಾನಗಳ ಅಂತೂ ಮೊತ್ತ ರೂ.1.82 ಲಕ್ಷಕ್ಕೂ ಹೆಚ್ಚಿನ ಮೊತ್ತವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ನಿರ್ದೇಶಕ ಕೆ.ಎಮ್. ಹೆಗಡೆ ಅಬ್ರಿ ಹೀಪ್ನಳ್ಳಿ, ಶಶಾಂಕ ಹೆಗಡೆ ಶೀಗೇಹಳ್ಳಿ, ನಾರಾಯಣ ಈರಾ ನಾಯ್ಕ ಮೆಣಸಿ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹಾಗೂ ಸಂಘದ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.