• Slide
    Slide
    Slide
    previous arrow
    next arrow
  • ಸರ್ಕಾರದ ಸೂಚನೆ; ಮಿನಿವಿಧಾನಸೌಧ ಇನ್ನು ‘ತಾಲೂಕು ಆಡಳಿತ ಸೌಧ’ ವಾಗಿ ನಾಮಕರಣ

    300x250 AD

    ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲೂಕು ಆಡಳಿತ ಕಛೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾಡು ನುಡಿ ಸಂಸ್ಕೃತಿಗೆ ಪೂರಕವಾಗಿ ಮಿನಿ ವಿಧಾನಸೌಧಗಳ ಹೆಸರನ್ನು ಬದಲಾವಣೆ ಮಾಡಿ ‘ತಾಲೂಕು ಆಡಳಿತ ಸೌಧ’ ನಾಮಕರಣ ಮಾಡಲಾಗಿದೆ.


    ವಿಧಾನಸೌಧದ ಸ್ಫೂರ್ತಿಯಿಂದ ತಾಲೂಕಿನ ಆಡಳಿತ ಕೇಂದ್ರಗಳನ್ನು ಮಿನಿ ವಿಧಾನಸೌಧ ಎಂದು ಹೇಳಲಾಗುತ್ತಿತ್ತು. ಆದರೆ ಮಿನಿ ಎಂಬುದು ಇಂಗ್ಲಿಷ್ ಪದವಾಗಿದ್ದು, ಚಿಕ್ಕದು ಎಂಬರ್ಥವನ್ನು ಇದು ನೀಡುತ್ತದೆ. ತಾಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ ಕಾಯಿದೆ ಕಾನೂನುಗಳನ್ನಾಗಲಿ ರೂಪಿಸುವ ಶಕ್ತಿ ಕೇಂದ್ರಗಳಲ್ಲದ ಕಾರಣ ‘ಮಿನಿವಿಧಾನಸೌಧ’ ಎಂಬುದರ ಬದಲಾಗಿ ‘ತಾಲೂಕು ಆಡಳಿತ ಸೌಧ’ ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕರು ಮತ್ತು ಗಣ್ಯ ವ್ಯಕ್ತಿಗಳು ಕೋರಿದ್ದರು.

    300x250 AD


    ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ `ಮಿನಿವಿಧಾನಸೌಧ’ ಎಂಬ ನಾಮಾಂಕಿತದ ಬದಲು ‘ತಾಲೂಕು ಆಡಳಿತ ಸೌಧ’ ಎಂದು ನಾಮಾಂಕಿತಗೊಳಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಸರ್ಕಾರ ಸೂಚಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top