• Slide
  Slide
  Slide
  previous arrow
  next arrow
 • ಬಾವಿ ನೀರು ಸರಬರಾಜಿಗೆ-ಸ್ಮಶಾನ ಜಾಗ ಮಂಜೂರಿಗೆ ಒತ್ತಾಯ: ಡಿಸಿಗೆ ಮನವಿ

  300x250 AD

  ಕಾರವಾರ: ಸರ್ಕಾರದ ಅನುದಾನಡಿ ಖಾಸಗಿ ಜಮೀನಲ್ಲಿ ನಿರ್ಮಾಣ ಮಾಡಿದ್ದ ಬಾವಿಯಿಂದ ಸ್ಥಳೀಯ ಜನರಿಗೆ ನೀರು ಸರಬರಾಜು ಮಾಡುವಂತೆ ಕ್ರಮಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ಸ್ಮಶಾನ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಹೊನ್ನಾವರ ತಾಲೂಕಿನ ಹಳದೀಪುರ ಪಂಚಾಯ್ತಿ ವ್ಯಾಪ್ತಿಯ ಹಬ್ಬುಚಿಟ್ಟೆ ಹಾಗೂ ಕಲಕಟ್ಟೆ ಭಾಗದ ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

  ಹಳದೀಪುರ ಗ್ರಾಮ ಪಂಚಾಯತ ವ್ಯಾಪ್ತಿಯಕೋಡಿಚಿಟ್ಟೆ ಹಾಗೂ ಸುತ್ತಮುತ್ತಲಿನ ಮಜಿರೆಗಳ ಪರಿಶಿಷ್ಟ ಜಾತಿ ಸೇರಿದಂತೆಇತರೆ ಸಮುದಾಯದ ಮನೆಗಳಿದೆ. ಆದರೆ ಈ ಭಾಗದಲ್ಲಿ ಬೇಸಿಗೆಯಾಗುತ್ತಿದ್ದಂತೆ ಕುಡಿಯುವ ನೀರಿನ ಬಾವಿಗಳಲ್ಲಿ ಉಪ್ಪು ನೀರು ಬಂದು ಬಳಕೆಗೆ ಬಾರದಂತಾಗಿದೆ. ಆದರೆಗ್ರಾಮದ ಸಮೀಪವೇ 12 ವ?ರ್Àಗಳ ಹಿಂದೆ ಸತೀಶ ಹಬ್ಬುಎಂಬುವವರ ಮಾಲ್ಕಿಜಾಗದಲ್ಲಿ ಸರಕಾರದಅನುದಾನದಲ್ಲಿ ಸಾರ್ವಜನಿಕರಿಗೆಕುಡಿಯುವ ನೀರು ಪೂರೈಸಲು ಬಾವಿಯನ್ನುತೆಗೆಯಲಾಗಿತ್ತು. ಆದರೆಕೊಡಿಚಿಟ್ಟೆಯವರಿಗೆ ಬಾವಿಯಿಂದ ನೀರು ಬಳಸಲು ಸತೀಶ್ ಹಬ್ಬುಅವರುತಕರಾರುತೆಗೆಯುತ್ತಿದ್ದಾರೆ. ಇದರಿಂದ ಈ ಭಾಗದಜನರುಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆಎಂದುದೂರಿದ್ದಾರೆ.

  300x250 AD

  ಇನ್ನುಇದೇ ಹಳದೀಪುರ ಪಂಚಾಯಿತಿ ವ್ಯಾಪ್ತಿಯಕಲಕಟ್ಟೆಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು ಗ್ರಾಮದಲ್ಲಿ ಸ್ಮಶಾನಇಲ್ಲದಕಾರಣಜನರು ಕಾರಣಜನರು ಸಾಕಷ್ಟು ಅನುಭವಿಸುತ್ತಿದ್ದಾರೆ. ಇಷ್ಟು ವರ್ಷ ಸ್ಮಶಾನ ಸ್ಮಶಾನ ನಿರ್ಮಾಣ ಸಂಬಂದ ನ್ಯಾಯಾಲಯದಲ್ಲಿದ್ದ ವ್ಯಾಜ್ಯಇತ್ಯರ್ಥಗೊಂಡಿದ್ದು ಸರ್ಕಾರಕೂಡಲೇ ಈ ಭಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಆ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

  ಮನವಿ ನೀಡುವ ವೇಳೆ ಹಳದೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ನಾಯ್ಕ, ವಿನಾಯಕ ಮುಕ್ರಿ, ಶಂಕರ ಮುಕ್ರಿ, ಲಕ್ಷ್ಮಣ ಮುಕ್ರಿ, ಗಣಪತಿ ಮುಕ್ರಿ, ಅಶೋಕ ಗೌಡ ಸೇರಿದಂತೆಇನ್ನಿತರರುಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top