ಶಿರಸಿ: ನಗರದ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನ.15 ರಂದು ನಡೆದ ಉದ್ಯೋಗ ಮೇಳದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ನಲವತ್ತು ಜನ ಪದವೀಧರರಿಗೆ ಬ್ಯಾಂಕ್ ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಯಿತು.
ಬೆಂಗಳೂರಿನ ಆಯ್.ಸಿಆಯ್.ಸಿ.ಆಯ್ ಬ್ಯಾಂಕ್ ಹಾಗೂ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಈ ಉದ್ಯೋಗ ಮೇಳವನ್ನು ಆಯ್.ಸಿ.ಆಯ್.ಸಿ.ಆಯ್ ಬ್ಯಾಂಕ್ ಮುಖ್ಯಸ್ಥ ಗೋಪಾಲ ಗಡಗಿ, ಉದ್ಘಾಟಿಸಿದರು. ಪ್ರೊ. ಎಸ್.ಎಸ್.ಬಾಡಗಾಂವಕರ ಉಪಸ್ಥಿತರಿದ್ದರು ಎಂದು ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.