• first
    second
    third
    previous arrow
    next arrow
  • ಕಲಾವಿದರು ಅವಕಾಶ ಸದುಪಯೋಗಪಡಿಸಿಕೊಳ್ಳಿ; ಎಂ.ಎನ್.ಹೆಗಡೆ

    300x250 AD

    ಯಲ್ಲಾಪುರ: ಕಾರ್ತಿಕೋತ್ಸವದಲ್ಲಿ ಭಾರತೀಯ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಸ್ಥಳೀಯ ಪ್ರತಿಭಾವಂತರಿಗೆ ವೇದಿಕೆ ಒದಗಿಸುತ್ತಿರುವುದು ಉತ್ತಮ ಕಾರ್ಯ ಎಂದು ಹಿರಿಯ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ ಹೇಳಿದರು.


    ಅವರು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಸ್ಪಂದನ ಯುವಕ ಸಂಘ, ಆದರ್ಶ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ತಿಕೋತ್ಸವದಲ್ಲಿ ಏರ್ಪಡಿಸಿರುವ ಯಕ್ಷ ಗಾಯನ-ವಾದನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಸ್ಪರ್ಧೆ ಸಾರ್ಥಕವಾಗುತ್ತದೆ ಎಂದರು.


    ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ, ಪ್ರಮುಖರಾದ ಎಸ್.ವಿ.ಭಟ್ಟ, ನಾಗೇಂದ್ರ ಭಟ್ಟ ಕವಾಳೆ, ಸುಬ್ರಾಯ ಭಟ್ಟ ಹಂಡ್ರಮನೆ ದೇವಸ್ಥಾನದ ಆಡಳಿತ ಮಂಡಳಿಯ ಅನಂತ ಗಾಂವ್ಕಾರ ಇತರರಿದ್ದರು. ಸುಬ್ರಾಯ ಭಟ್ಟ ಆನೆಜಡ್ಡಿ ನಿರ್ವಹಿಸಿದರು.

    300x250 AD


    ಸ್ಪರ್ಧೆಯಲ್ಲಿ ತಾಲೂಕಿನ ಹವ್ಯಾಸಿ ಕಲಾವಿದರ 11 ತಂಡಗಳು ಭಾಗವಹಿಸಿದ್ದು, 6 ದಿನಗಳ ಕಾಲ ಪ್ರತಿದಿನ 2 ತಂಡಗಳು ಗಾಯನ-ವಾದನ ಪ್ರಸ್ತುತಪಡಿಸಲಿವೆ. ನಿರ್ಣಾಯಕರಾಗಿ ಅನಂತ ಹೆಗಡೆ ದಂತಳಿಗೆ, ಗಣಪತಿ ಭಾಗ್ವತ ಕವಾಳೆ ಹಾಗೂ ಸಿ.ಜಿ.ಹೆಗಡೆ ಕಾರ್ಯನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Back to top