• Slide
  Slide
  Slide
  previous arrow
  next arrow
 • ವಿ.ಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ

  300x250 AD

  ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ದೈವಾರ್ಷಿಕ ಚುನಾವಣೆಗೆ ನ. 16 ರಿಂದ 23ರ ವರೆಗೆ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರದ ನಮೂನೆಗಳನ್ನು ಪಡೆದು, ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಅಪರ ಜಿಲ್ಲಾಧಿಕಾರಿಗೆ ನ. 23 ರೊಳಗಾಗಿ ಬೆಳಗ್ಗೆ 11 ಗಂಟೆಯಿAದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

  ಅಭ್ಯರ್ಥಿಯ ಸಹಿತ 5 ಜನರಿಗೆ ಮಾತ್ರನಾಮ ಪತ್ರ ಸಲ್ಲಿಸಲು ಕೊಠಡಿಗೆ ಪ್ರವೇಶಿಸಲು ಅವಕಾಶವಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರನು ಅಥವಾ ಅವನ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲುಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಇಬ್ಬರಲ್ಲೊಬ್ಬ ಅಧಿಕಾರಿಗೆ ನ. 26 ರಂದು ಮಧ್ಯಾಹ್ನ 3 ಗಂಟೆಗೆ ಮುಂಚೆ ಸಲ್ಲಿಸಬಹುದಾಗಿದೆ.

  ನಾಮ ಪತ್ರಗಳನ್ನು ಸಲ್ಲಿಸುವ ಅಭ್ಯರ್ಥಿಯು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದ 10 ಜನ ಮತದಾರರಿಂದ ಸೂಚಿಸಲ್ಪಟ್ಟಿರಬೇಕು. ನಾಮ ಪತ್ರ ನಮೂನೆ-2 ಇ ಎಲ್ಲ ಕಾಲಂಗಳನ್ನು ಭರ್ತಿ ಮಾಡಿ ಅಭ್ಯರ್ಥಿಯು ಸಹಿ ಮಾಡಬೇಕು. ಸಾಮಾನ್ಯ ವರ್ಗದವರು 10 ಸಾವಿರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರು (ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯ) 5 ಸಾವಿರ ರೂ ಠೇವಣಿ ಇಡಬೇಕು.

  300x250 AD

  ಅಭ್ಯರ್ಥಿಯು ಕರ್ನಾಟಕ ರಾಜ್ಯದ ಯಾವುದೇ ವಿಧಾನ ಸಭಾಕ್ಷೇತ್ರದ ಮತದಾರರಿರುವ ಬಗ್ಗೆ ಸಂಬAಧಿಸಿದ ಸಹಾಯಕ ಮತದಾರರ ನೊಂದಣಾಧಿಕಾರಿಗಳಿAದ ಪಡೆದ ದೃಢೀಕರಣ ಪತ್ರ, ಪ್ರಮಾಣ ವಚನದ ನಿಗದಿತ ನಮೂನೆಯಲ್ಲಿ 100 ರೂ. ಬಾಂಡ್ ಪೇಪರನಲ್ಲಿ ಫಾರ್ಮ ನಂ. 26 ದಲ್ಲಿ ಅಫಿಡಾವಿಟ್ ಫಾರ್ಮ್ ನಂ. 26 ಎಲ್ಲ ಕಾಲಂಗಳನ್ನು ತುಂಬಿರಬೇಕು, ಎಲ್ಲಾ ಕಾಲಂ ತುಂಬಬೇಕು. ಎಲ್ಲಾ ದಾಖಲಾತಿಗಳ ಅಫಿಡೆವಿಟ್ 2 ದ್ವೀಪ್ರತಿ ಹಾಗೂ 1 ಜೇರಾಕ್ಸ್ ಪ್ರತಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top