ಕಾರವಾರ: ಹಿಂದುತ್ವವನ್ನು ಭಯೋತ್ಪಾದನೆಗೆ ಹೋಲಿಸಿದ ಸಲ್ಮಾನ್ ಖುರ್ಷಿದ್ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಮಂಗಳವಾರ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರಿಯ ಗೃಹ ಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.
ಇದೆ ಸಂದರ್ಭದಲ್ಲಿ, ಕಾಂಗ್ರೆಸ್ಸಿನ ನಾಯಕರು ಹಿಂದೂಗಳನ್ನು ಬೊಕೊ-ಹರಾಮ್ ಮತ್ತು
ಐಸಿಸ್’ನ ಭಯೋತ್ಪಾದಕರೊಂದಿಗೆ ಹೋಲಿಸಿ ಅವಮಾನಿಸುತ್ತಿದ್ದಾರೆ. ಇದಕ್ಕೆ ತೇಪೆ ಹಚ್ಚಲು ಹಿಂದುತ್ವ ಮತ್ತು ಹಿಂದೂಯಿಸಮ್' ನಡುವೆ ವ್ಯತ್ಯಾಸವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಹಿಂದೂ ಸಮಾಜವು ಇನ್ನು ಮರುಳಾಗುವುದಿಲ್ಲ, ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿಡಬೇಕು. ಅವರಿಗೆ ನಿಜವಾಗಿಯೂ ಹಿಂದೂ ಧರ್ಮದ ಮೇಲೆ ಪ್ರೀತಿ ಇದ್ದರೆ, ಸಲ್ಮಾನ್ ಖುರ್ಷಿದ್ ಅವರಿಗೆ ತಮ್ಮ ಪುಸ್ತಕವನ್ನು ಹಿಂಪಡೆಯಬೇಕು ಮತ್ತು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಲು ಹೇಳಬೇಕು.
ಭಾರತದಲ್ಲಿ ಡಾ-ವಿನ್ಸಿ ಕೋಡ್, ಸೈಟಾನಿಕ್ ವರ್ಸಸ್ ಈ ಇತರ ಧರ್ಮದವರ ಪುಸ್ತಕಗಳನ್ನು ನಿಷೇಧಿಸಬಹುದಾದರೆ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ
ಸನ್ರೈಸ್ ಓವರ್ ಅಯೋಧ್ಯಾ – ನೇಷನ್‍ಹುಡ್ ಇನ್ ಅವರ್ ಟೈಮ್ಸ್’ ಅನ್ನು ಸಹ ನಿಷೇಧಿಸಬೇಕೆಂದು ಇದೆ ಸಂಧರ್ಭದಲ್ಲಿ ಸರಕಾರಕ್ಕೆ ಮನವಿಯನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಪಾಂಡರಿನಾಥ ಗುರವ್ ಹಿಂದೂ ಜನಜಾಗೃತಿ ಸಮಿತಿಯ ಸಾಗರ ಕುರ್ಡೆಕರ, ಸೋಮೇಶ್ ಗುರವ ಉಪಸ್ಥಿತರಿದ್ದರು.