ದಾಂಡೇಲಿ: ನಗರದ ಪಟೇಲ್ ವೃತ್ತದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಚನ ಮಂಟಪದ ನವರತ್ನ ಪೂಜೆ ನೆರವೇರಿತು.
ತಾಲೂಕಿನ ಜಗಜ್ಯೋತಿ ಬಸವೇಶ್ವರ ಸಮಿತಿ ವತಿಯಿಂದ ಜಗಜ್ಯೋತಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿದೆ. ಇದರ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂಬೇವಾಡಿ ಗಣಪತಿ ಮಂದಿರದ ಅರ್ಚಕ ವಿಘ್ನೇಶ್ವರ ಭಟ್, ಉಳವಿಯ ಪ್ರಧಾನ ಅರ್ಚಕ ಕಲಮಟ ಶಾಸ್ತ್ರಿ ಹಾಗೂ ಸಾಂತಿ ವೀರೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ವೀರಶೈವ ಸಮಾಜ ಅಧ್ಯಕ್ಷ ಎಸ್.ಎಂ. ಪಾಟೀಲ್, ಬಸವೇಶ್ವರ ಸಮಿತಿ ಅಧ್ಯಕ್ಷ ಯು.ಎಸ್. ಪಾಟೀಲ್, ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಖಜಾಂಚಿ ನಂಜುಂಡಪ್ಪ ಹಾಗೂ ಪದಾಧಿಕಾರಿಗಳು ಇದ್ದರು.