ಜೊಯಿಡಾ: ಕೈಗಾ ಬರ್ ಡರ್ಸ್ ತಂಡ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣಾ ಕಾರ್ಯಗಾರದಲ್ಲಿ 60 ಕ್ಕು ಹೆಚ್ಚು ಪಕ್ಷಿ ಪ್ರೇಮಿಗಳು ಮಾಹಿತಿ ಪಡೆದುಕೊಂಡರು.
ಸಂಜೀವಿನ ಟ್ರಸ್ಟ್ ಮತ್ತು ಕಾಳಿ ಬ್ರಿಗೇಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಯಶಸ್ವಿಯಾಗಿದ್ದು, 65 ಕ್ಕು ಹೆಚ್ಚು ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಯಿತು.
ಅಲ್ಲದೇ ಪಕ್ಷಿಗಳ ಜೀವನ ಹಾಗೂ ಜೀವವೈವಿಧ್ಯತೆಯಲ್ಲಿ ಅವುಗಳ ಸಂಬಂಧ, ಕೊಡುಗೆಗಳನ್ನು ಅಭ್ಯರ್ಥಿಗಳಿಗೆ ವಿವರಿಸಲಾಯಿತು. ಜೊಯಿಡಾ ಚಿಟ್ಟೆ ಉದ್ಯಾನವನದಲ್ಲಿ ತಜ್ಞ ರಾಮಚಂದ್ರ ಅವರು ಚಿಟ್ಟೆ ಪ್ರಪಂಚವನ್ನು ಬಿಚ್ಚಿಟ್ಟರು. ಸ್ಥಳದಲ್ಲಿ 110 ಕ್ಕು ಹೆಚ್ಚು ಬಗೆಯ ಚಿಟ್ಟೆಗಳನ್ನು ಗುರುತಿಸಲಾಯಿತು. ಅಲ್ಲದೇ ಅಲ್ಲಿನ ಹೂ, ಗಿಡ, ಮರಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಈವೇಳೆ ಆಯೋಜಕರಾದ ಕೈಗಾ ಬರ್ಡರ್ಸ್ ತಂಡದ ರಶ್ಮಿ, ಆದಿತ್ಯ, ರವಿ ರೇಡ್ಕರ್, ಸುನಿಲ್ ದೇಸಾಯಿ ಅವರನ್ನು ಸನ್ಮಾನಿಸಲಾಯುತು.
ಕೈಗಾ ಬರ್ಡರ್ಸ್ ತಂಡದ ಮೋಹನ ದಾಸ್, ಹರೀಶ್ ಕಲೂರು, ದಿನೇಶ್ ಗಾಂವ್ಕರ್, ಸೂರಜ್ ಬನವಾಳಿಕರ್, ರಜನಿರಾವ್, ವನಸಂಜೀವಿನಿ ತಂಡದ ದಿನೇಶ ಹೊಳ್ಳ ಇತರರು ಇದ್ದರು.