ಅಂಕೋಲಾ: ಶೈಕ್ಷಣಿಕ ವೈಜ್ಞಾನಿಕ ಹಾಗೂ ಕ್ರೀಡಾ ರಂಗದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಹಾಗೂ 2019-20 ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಮಲೆನಾಡಗಾಂಧಿ ದಿ. ಎಚ್ ಜಿ ಗೋವಿಂದೇ ಗೌಡ ಪ್ರಶಸ್ತಿ ಪುರಸ್ಕøತ ಶಾಲೆ ಹಿಲ್ಲೂರಿನಲ್ಲಿ ಮಕ್ಕಳ ದಿನಾಚರಣೆಗೆ ಮಕ್ಕಳಿಂದಲೇ ಪಾಠ ಮಾಡಲು ಅವಕಾಶ ಕಲ್ಪಿಸಲಾಗಿತ್ತು. 10ನೇ ತರಗತಿ ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಕ ಸೀರೆಯಲ್ಲಿ ಶಾಲೆಗೆ ಆಗಮಿಸಿದ್ದರು.
ಶಿಕ್ಷಕರು ಪಾಠ ಮಾಡುವುದು ಸಹಜ. ಮಕ್ಕಳ ದಿನಾಚರಣೆಯ ಶುಭ ಸಂದರ್ಭದಲ್ಲಿ ಮಕ್ಕಳೇ ಶಿಕ್ಷಕರಾಗಿ ಪಾಠಮಾಡಿದ್ದು ವಿಶೇಷವಾಗಿತ್ತು. ಮುಖ್ಯ ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಕರು, ಹೀಗೆ ಶಾಲೆಯ ಸಂಪೂರ್ಣ ಜವಾಬ್ದಾರಿ ಮಕ್ಕಳೇ ನಿರ್ವಹಿಸಿದ್ದರು. ಶಾಲಾ ಶಿಕ್ಷಕರು ವಿದ್ಯಾರ್ಥಿ ಶಿಕ್ಷಕರು ಮಾಡಿದ ಪಾಠವನ್ನು ವೀಕ್ಷಣೆ ಮಾಡಿದರು. ಪ್ರಾರ್ಥನೆಯ ಸಂದರ್ಭದಲ್ಲಿ ಶಿಕ್ಷಕರು ನಿರ್ವಹಿಸುವ ಕಾರ್ಯವನ್ನು ವಿದ್ಯಾರ್ಥಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಾಲಿನಲ್ಲಿ ಶಿಕ್ಷಕರು ನಿಂತಿದ್ದರು. ಭಾರ್ಗವಿ ಸಿಂಧೆ ಮುಖ್ಯ ಶಿಕ್ಷಕಿಯಾಗಿ, ಸತ್ಯಪ್ರಾದ ಗಣೇಶ ಕಿಣಿ ವಿಜ್ಞಾನ ಶಿಕ್ಷಕನಾಗಿ, ತನುಜಾ ದಾಮೋದರ ಪಟಗಾರ ಕನ್ನಡ ಶಿಕ್ಷಕಿಯಾಗಿ, ಸುಶ್ಮಿತಾ ನಾಯ್ಕ ಹಿಂದಿ ಶಿಕ್ಷಕಿಯಾಗಿ, ಎ .ವಿಕಾಸ ಶಿಕ್ಷಕನಾಗಿ, ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಸ್ವಾತಿ ರಾಮಾ ಗೌಡ, ಇಂಗ್ಲಿಷ ಶಿಕ್ಷಕಿಯಾಗಿ ಭೂಮಿಕಾ ನಾಯಕ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿನಿ ಶಿಕ್ಷಕಿಯರು ಸೀರೆ ತೊಟ್ಟು ಪಾಠ ಮಾಡಿದ್ದು ವಿಶೇಷವಾಗಿತ್ತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಘನ ಅಧ್ಯಕ್ಷತೆಯನ್ನು 10ನೇ ತರಗತಿಯ ವಿದ್ಯಾರ್ಥಿನಿ ಭಾರ್ಗವಿ ಸಿಂಧೆ ವಹಿಸಿ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅಂಕಿತಾ ಪಟಗಾರ ಸ್ವಾಗತಿಸಿದರು. ಭಾರ್ಗವ ನಾಯಕ, ಸತ್ಯ ಪ್ರಸಾದ ಕಿಣಿ ಮಕ್ಕಳ ದಿನಾಚರಣೆ ಕುರಿತು ಮಾತನಾಡಿದರು. ಬಜ್ಜು ಪಿಂಗಳೆ ವಂದಿಸಿದರು. ಅನಿತಾ ಮಾಣು ಗೌಡ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ದಿನಾಚರಣೆ ಶುಭ ಸಂದರ್ಭದಲ್ಲಿ ನಮಗೆ ಪಾಠ ಮಾಡುವಂತೆ ನಮ್ಮನ್ನು ಪ್ರೇರೇಪಿಸಿ ಶಾಲೆಯ ಸಮಸ್ಥ ಜವಾಬ್ದಾರಿಯನ್ನು ನೀಡಿದ ನಮ್ಮ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕವೃಂದದ ಪೆÇ್ರೀತ್ಸಾಹವನ್ನು ಜೀವನದಲ್ಲಿ ನಮಗೆ ಮರೆಯಲು ಸಾಧ್ಯವಿಲ್ಲ ಎಂದು ಶಾಲಾ ಸಂಸತ್ತಿನ ಪ್ರಧಾನಿ ಹಾಗೂ ಸಭಾಧ್ಯಕ್ಷ ಸ್ಥಾನ ವಹಿಸಿದ ಭಾರ್ಗವಿ ಸಿಂಧೆ ಅಭಿಪ್ರಾಯ ವ್ಯಕ್ತಪಡಿಸಿದಳು. ಎಲ್ಲ ಶಿಕ್ಷಕ ವೃಂದದವರು ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಂತೆ ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಗೆ, ಸಂಗಿತ ಕುರ್ಚಿ, ಗಾಳಿಪಟ ಹಾರಿಸುವುದು, ಮುಂತಾದ ಅನೇಕ ಮೋಜಿನ ಆಟ ಆಡಿಸಲಾಯಿತು ಹಾಗೂ ಮಕ್ಕಳಿಗೆ ಸಿಹಿ ವಿತರಿಸಲಾಯಿತು.