• Slide
    Slide
    Slide
    previous arrow
    next arrow
  • ಆಧಾರ್ ನೋಂದಣಿ- ತಿದ್ದುಪಡಿ ಸೌಲಭ್ಯ ಪಡೆದುಕೊಂಡ 700ಕ್ಕೂ ಅಧಿಕ ಮಂದಿ

    300x250 AD

    ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತದ ಆವಾರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ಈ ಭಾಗದ ಜನರಿಗೆ ಒದಗಿಸಿಕೊಟ್ಟಿದ್ದು, ಇದರ ಸೌಲಭ್ಯವನ್ನು 704 ಜನರು ಪಡೆದುಕೊಂಡರು.


    ಈ ಒಂದು ಸೇವೆಯನ್ನು ಮತ್ತು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ ನಮ್ಮ ಆಧಾರ್ ಕ್ಯಾಂಪ್ ಯಶಸ್ವಿಯಾಗಿ ನಡೆಸಿಕೊಟ್ಟ ಅಂಚೆ ಇಲಾಖೆಯ ಸಿಬ್ಬಂದಿಗ ಅಮಿತ್ ಗೌಡ, ಮತ್ತು ಪ್ರದೀಪ್ ಪೆಡ್ನೆಕರ್ ರವರಿಗೆ ಸಮಸ್ತ ಡೋಂಗ್ರಿ ಪಂಚಾಯತ ಸಾರ್ವಜನಿಕರ ಮತ್ತು ಗೆಳೆಯರ ಬಳಗ, ಗ್ರಾಮ ಪಂಚಾಯತ ಪರವಾಗಿ ಅಂಕೋಲಾ ಅಂಚೆ ಇಲಾಖೆಯ ಕಛೇರಿಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

    300x250 AD


    ಹಾಗೆ ಈ ಒಂದು ವ್ಯವಸ್ಥೆಯನ್ನು ಡೋಂಗ್ರಿ ಪಂಚಾಯತದಲ್ಲಿ ಮಾಡುವುದಾಗಿ ಅವಕಾಶ ಕೇಳಿದಾಗ ಒಪ್ಪಿಗೆ ನೀಡಿ ಈ ಒಂದು ಅವಕಾಶ ಕಲ್ಪಿಸಿಕೊಟ್ಟ ಅಂಚೆ ಇಲಾಖೆಯ ಎಸ್‍ಪಿ ಕಾರವಾರ ರವೀಂದ್ರ ನಾಯ್ಕ, ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆದ ವ್ಹಿ.ಎಚ್ ನಾಯ್ಕ ಮತ್ತು ಎ ಎಸ್ ಪಿ ಮೆಡಮ್ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಗ್ರಾಮ ಪಂಚಾಯತ ಮತ್ತು ಗೆಳೆಯರ ಬಳಗ ಅಭಿನಂದನೆ ತಿಳಿಸಿತು.

    Share This
    300x250 AD
    300x250 AD
    300x250 AD
    Leaderboard Ad
    Back to top