ವಾರಾಣಸಿ: ಕಾಶಿಯ ಶ್ರೇಷ್ಠ ಪರಂಪರೆ ಮತ್ತು ಸಂಸ್ಕೃತಿ ವಿಶೇಷವಾಗಿ ಶತಮಾನಗಳಷ್ಟು ಹಳೆಯ ಗೋಸ್ವಾಮಿ ತುಳಸಿದಾಸ್, ಸಂತ ಕಬೀರ್, ಸಂತ ರೈದಾಸ್, ಮುನ್ಷಿ ಪ್ರೇಮಚಂದ್, ಶ್ರೀ ಜೈಶಂಕರ್ ಪ್ರಸಾದ್, ಭರತೇಂದು ಹರಿಶ್ಚಂದ್ರರಂತಹ ಮೇಧಾವಿಗಳ ವ್ಯಕ್ತಿತ್ವಗಳನ್ನು ಆಚರಿಸಲು ವಾರಣಾಸಿಯ ಇಂಟರ್‍ನ್ಯಾಷನಲ್ ಕೊ ಅಪರೇಶನ್ & ಕನ್ವೆನ್ಷನ್ ಸೆಂಟರ್ ನವೆಂಬರ್ 16 ರಿಂದ 18 ರವರೆಗೆ `ಕಾಶಿ ಉತ್ಸವ’ವನ್ನು ಆಯೋಜಿಸಿದೆ.
`ವಾರಣಾಸಿಯ ಇಂಟರ್‍ನ್ಯಾಷನಲ್ ಕೊಅಪರೇಶನ್ & ಕನ್ವೆನ್ಷನ್ ಸೆಂಟರ್ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಪರವಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ವಾರಣಾಸಿ ಆಡಳಿತದ ಬೆಂಬಲದೊಂದಿಗೆ
ಆಜಾದಿ ಕಾ ಅಮೃತ್ ಮಹೋತ್ಸವ’ದ ಅಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ” ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಉತ್ಸವದ ಪ್ರತಿ ದಿನಕ್ಕೂ ಒಂದೊಂದು ಥೀಮ್ ಅನ್ನು ಮೀಸಲಿಡಲಾಗಿದೆ ಮತ್ತು ಅವುಗಳೆಂದರೆ- ಕಾಶಿ ಕೆ ಹಸ್ತಾಕ್ಷರ್
; ಕಬೀರ್, ರೈದಾಸ್ ಕಿ ಬನಿ ಔರ್ ನಿರ್ಗುನ್ ಕಾಶಿ
ಮತ್ತು ಕವಿತಾ ಔರ್ ಕಹಾನಿ- ಕಾಶಿ ಕಿ ಜುಬಾನಿ
. ಮೊದಲ ದಿನವು ಖ್ಯಾತ ಸಾಹಿತಿಗಳಾದ ಭರತೇಂದು ಹರಿಶ್ಚಂದ್ರ ಮತ್ತು ಶ್ರೀ ಜೈಶಂಕರ್ ಪ್ರಸಾದ್ ಅವರ ಮೇಲೆ ಕೇಂದ್ರೀಕರಿಸುತ್ತದೆ.
ಎರಡನೇ ದಿನವು ಪ್ರಮುಖ ಕವಿಗಳಾದ ಸಂತ ರೈದಾಸ್ ಮತ್ತು ಸಂತ ಕಬೀರದಾಸ್ ಮೇಲೆ ಕೇಂದ್ರಿತವಾಗಿರಲಿದೆ ಮತ್ತು ಅಂತಿಮ ದಿನದಲ್ಲಿ ಗೋಸ್ವಾಮಿ ತುಳಸಿದಾಸ್ ಮತ್ತು ಮುನ್ಷಿ ಪ್ರೇಮಚಂದ್ ಕೇಂದ್ರಬಿಂದುಗಳಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮಗಳು ಪ್ಯಾನಲ್ ಚರ್ಚೆಗಳು, ಪ್ರದರ್ಶನಗಳು, ಚಲನಚಿತ್ರ ಪ್ರದರ್ಶನಗಳು, ಸಂಗೀತ, ನಾಟಕ ಮತ್ತು ನೃತ್ಯ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಗಣ್ಯ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.
ನ್ಯೂಸ್ 13