ಅಂಕೋಲಾ: ನಗರದ ಹುಲಿದೇವರವಾಡದ ಲಲಿತಾ ಜೋಗಳ್ಸೆ ಇವರ ಮನೆಯಂಗಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಬಿ.ಆಗೇರ ದೇಶದ ಮೊದಲ ಪ್ರಧಾನಿ ನೆಹರೂರವರ ಹುಟ್ಟುಹಬ್ಬದ ನಿಮಿತ್ತ ಅವರ ಇಷ್ಟದಂತೆ ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಮಕ್ಕಳು ಬೆಳೆದು ಆದರ್ಶ ವ್ಯಕ್ತಿಗಳಾಗಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಆತ್ಮಸ್ಥರ್ಯ ಹೆಚ್ಚಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಲಲಿತಾ ಜೋಗಳ್ಸೆ ಅವರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಉದ್ಘಾಟಕರಾಗಿ ಆಗಮಿಸಿದ ರಾಜು ಹರಿಕಂತ್ರ, ಶಿಕ್ಷಕರಾದ ಅರುಣ ಸೇಡಗೇರಿ, ರಾಜು ಶೇಡಗೇರಿ, ಗಣಪತಿ ಆಗೇರ್, ಮಂಜುನಾಥ ಶೇಡಗೇರಿ, ಕೆಎಲ್‍ಇ ಕಾಲೇಜಿನ ಪ್ರಾಂಶುಪಾಲರಾದ ಸರೋಜಿನಿ ಹಾರ್ವಾಡೇಕರ, ಆಗೇರ್ ಸಮಾಜದ ಅದ್ಯಕ್ಷ ಗುರು ಶೇಡಗೇರಿ, ಬ್ಯಾಂಕ್ ನೌಕರ ಮೋಹನ ಹಾರ್ವಾಡೇಕರ, ವಕೀಲರಾದ ಜಗದೀಶ ಹಾರ್ವಾಡೇಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಗೇರ್ ಸಮಾಜದ ಪುಟ್ಟಮಕ್ಕಳಿಂದ ನೆಹರು ಕುರಿತು ಬಾಷಣ ಹಾಗೂ ನೃತ್ಯ ಹಾಡು ಮುಂತಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಶಿಕ್ಷಕ ಜಯಶೀಲ ಆಗೇರ ಕಾರ್ಯಕ್ರಮ ನಿರ್ವಹಿಸಿದರು ಸಂಘಟಕಿ ಲಲಿತಾ ಜೊಗಳ್ಸೆ ವಂದಿಸಿದರು.