ಹಳಿಯಾಳ: ಹಳಿಯಾಳ ವಲಯದ ಕೆಸರೊಳ್ಳ ಅರಣ್ಯ ತನಿಖಾ ಠಾಣೆಯ ಮುಖಾಂತರ ಹಾದು ಹೋಗುವ ವಾಹನವೊಂದನ್ನು ಇಂದು ಬೆಳಗಿನ ಜಾವ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬೆಲೆಬಾಳುವ ಸಾಗವಾನಿ ಕಟ್ಟಿಗೆಯ ಪೀಠೋಪಕರಣದ ಅಕ್ಕಮ ಸಾಗಾಣಿಕಾ ಜಾಲ ಪತ್ತೆಯಾಗಿದೆ.
ಈ ವ್ಯಕ್ತಿಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಸಾಗವಾನಿ ಕಟ್ಟಿಗೆಯ ಪೀಠೋಪಕರಣ ವಶಪಡಿಸಿಕೊಂಡು 8 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಟಾಟಾ ಅಲ್ಟ್ರಾ 912 ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ವಾಹನ ಹಳಿಯಾಳದ ಪ್ರಭಾವಿ ವ್ಯಕ್ತಿಯೋರ್ವರಿಗೆ ಸೇರಿದ್ದು ಎಂಬ ಆರೋಪ ಕೇಳಿಬಂದಿದೆ. ವಾಹನ ಚಾಲಕ ನಿಸಾರ್ ಅಹಮದ್ ಕಮಾಲ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಮೂರು ಸಾಗವಾನಿ ಬೆಡ್, ಎರಡು ಟೇಬಲ್, ಒಂದು ಸೋಫಾ ಸೆಟ್ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಸಾಗವಾನಿ ಪೀಠೋಪಕರಣಗಳನ್ನು ಹಾಗೂ 8 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾಕ್ಟರ್ ಅಜ್ಜಯ್ಯ ಜಿ ಆರ್ ಸಾಯಕ್ಕ, ಅರಣ್ಯ ಸಂರಕ್ಷಣಾ ಅಧಿಕಾರಿ ವಿನಿತಾ ಚೌಹಾಣ, ಅರಣ್ಯ ಅಧಿಕಾರಿ ಹಿರೇಮಠ, ಉಪ ವಲಯ ಅರಣ್ಯಾಧಿಕಾರಿ ಶಿವಾನಂದ್ ಜುಂಜು ವಾಡ್ಕರ್, ಅರಣ್ಯ ತನಿಖಾ ಠಾಣೆ ಸಿಬ್ಬಂದಿ ಎಲ್ ಆರ್ ಲಿಂಗಬಂಸೆ, ಅರಣ್ಯ ರಕ್ಷಕರಾದ ಗಜಾನಂದ್ ನರಸನ್ನವರ್ ರೇಣುಕಾ ಮಡಿವಾಳ ಸಂಜು ಗಳಿಗೆ ವಿತ್ತಲ್ ಬಗಲಿ ವಾಹನ ಚಾಲಕ ಪುಂಡಲಿಕ್ ಲಾರ್ಡ್ ಮಾರುತಿ ಕಾರ್ಯಗಾರ ಸಿಬ್ಬಂದಿ ಸಂತೋಷ್ ಗೌಡ ನಾರಾಯಣ್ ಸಿಂಧೆ ಗುಂಡು ಲಕ್ಕನ್ ಗೌಡ ಅವರು ಕಾರ್ಯಾಚರಣೆಯಲ್ಲಿ ಭಾಗವಹಿದ್ದರು. ಹಳಿಯಾಳ ವಲಯ ಅರಣ್ಯ ಅಧಿಕಾರಿ ಮಹೇಶ್ ಹಿರೇಮರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.