ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಶೇ.0.41 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅದರಂತೆ ಕಳೆದ ಎರಡು ದಿನದ ಅವಧಿಯ ಸೋಮವಾರ ಶೇ. 0.37 ಹಾಗೂ ರವಿವಾರ ಶೇ. 0.40 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು. ಜಿಲ್ಲಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಸಾವಿನ ಸಂಖ್ಯೆ ಕೂಡ ಇಳಿಕೆಯಾಗುತ್ತಿರುವದು ಜಿಲ್ಲೆಯ ಜನತೆಗೆ ಸಮಾಧಾನಕರ ವಿಷಯವಾಗಿದೆ.