ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಬಳಿ ಸಾಗುತ್ತಿದ್ದ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ, ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಬಂದ್ ಆದ ಘಟನೆ ಸೋಮವಾರ ಸಂಜೆ ಜರುಗಿದೆ.
ಅದೃಷ್ಟವಶಾತ್ ಅಕ್ಕಪಕ್ಕದಲ್ಲಿ ಯಾವ ವಾಹನಗಳು, ಜನರು ಸುಳಿದಾಡದಿರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಟ್ರ್ಯಾಕ್ಟರ ಚಾಲಕನೂ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ನಂತರ ಗ್ರಾಮಸ್ಥರೆಲ್ಲರೂ ಬಿದ್ದಿರುವ ಕಬ್ಬುಗಳನ್ನು ಪಕಕ್ಕೆ ಇಟ್ಟು ರಸ್ತೆ ಸಂಚಾರ ಸುಗಮಕ್ಕೆ ಪ್ರಯತ್ನಿಸಿದರು. ಗ್ರಾಮದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿರುವುದರಿಂದ ಸಾಗಣೆ ಮಾಡುವ ವಾಹನಗಳು ಚಲಿಸುವುದೇ ದುಸ್ತರವಾಗಿದೆ.
ರಸ್ತೆ ದುರಸ್ತಿ ಬಗ್ಗೆ ಲೊಕೋಪಯೋಗಿ ಇಲಾಖೆಯವರಿಗೆ ಹಲವು ಸಲ ಮನವಿ ಮಾಡಿದರೂ ಗುಂಡಿ ಮುಚ್ಚುವುದಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತ ರೈತರು ಬೆಳೆದ ಬೆಳೆಯನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಅಗಡಿ ಗ್ರಾಮಸ್ಥ ಪರಮೇಶ್ವರ್ ಡಿ. ದೂರಿದರು.