ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಪೂಜ್ಯರ ಅನುಜ್ಞೆಯೊಂದಿಗೆ ಇದೇ ಬರುವ ಗುರುವಾರ ನ.18 ರಂದು ಮುತ್ತಿನಕೆರೆ ಸಂಕಟಹರ ಶ್ರೀ ವೆಂಟರಮಣ ದೇವರ ಸನ್ನಿಧಿಯಲ್ಲಿ ವೈಕುಂಠ ಚತುರ್ದಶಿ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗುರುವಾರ ಮುಂಜಾನೆ 9 ಗಂಟೆಯಿಂದ ಸಂಕಲ್ಪ ಪೂಜೆಯೊಂದಿಗೆ 108 ಪುರುಷ ಸೂಕ್ತ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12;30ಕ್ಕೆ ಮಹಾಮಂಗಳಾರತಿ ಪೂಜೆ ಸಲ್ಲಿಸಲಾಗುವುದು. ಸಂಕಲ್ಪ ಪೂಜೆಗೆ ಹೆಸರನ್ನು ನೊಂದಾಯಿಸಲು ಪ್ರಸನ್ನ ಹೆಗಡೆ ವಾಜಗದ್ದೆ ಮೊ.9483484045 ಇವರನ್ನು ಸಂಪರ್ಕಿಸಬೇಕೆಂದು, ಸಂಕಲ್ಪ ಪೂಜಾ ದೇಣಿಗೆ-51ರೂ ನೀಡಬೇಕೆಂದು ತಿಳಿಸಿದ್ದಾರೆ. ಮತ್ತು ಅದೇ ದಿನ ಸಂಜೆ 6-30ಕ್ಕೆ ಭಕ್ತಾದಿಗಳಿಂದ ಶ್ರೀ ದೇವರಿಗೆ ದೀಪೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.