ಶಿರಸಿ: ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟ 75,000 ರೂ. ಮೌಲ್ಯದ ಗಾಂಜಾವನ್ನು ಶಿರಸಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ತಾಲೂಕಿನ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಕಾರ್ಮಿಕರ ಕ್ಯಾಂಪ್ ನಂಬರ್ 9 ರ ಮನೆ ಮೇಲೆ ದಾಳಿ ನಡೆಸಿದ ಪೆÇಲೀಸರು ಸುಮಾರು 303 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪಂಜಾಬ ಮೂಲದ ಜಸ್ವಿಂದರ್ ಸಿಂಗ್ ಹಾಗೂ ಅಜಾದಪುರದ ನಿತಿನ್ ಕುಮಾರ್ ಎನ್ನುವ ಇಬ್ಬರನ್ನು ಬಂಧಿಸಲಾಗಿದೆ.
ಇವರು ಮಾರಾಟದ ಉದ್ದೇಶದಿಂದ ಚೀಲದಲ್ಲಿ ಗಾಂಜಾ ಹೂವು ಮತ್ತು ಬೀಜಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಶಿರಸಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.