ಶಿರಸಿ: ತಾಲೂಕಿನ ಹುಲೇಕಲ್ ರಸ್ತೆಯಲ್ಲಿರುವ ಕೋಳಿಫಾರ್ಮ್ ಒಂದರ ಹೊಲಸು ನೀರು ಕೆಂಗ್ರೆಹೊಳೆಗೆ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಂಗ್ರೆ ಹೊಳೆ ನೀರು ನಗರಕ್ಕೆ ಕುಡಿಯಲು ಬಳಕೆಯಾಗುತ್ತಿದ್ದು, ಹೀಗಾಗಿ ನೀರಿನ ಗುಣಮಟ್ಟ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೋಳಿಫಾರ್ಮ್ ನಿಂದ ಬರುವ ನೀರು, ಕೋಳಿ ಹಿಕ್ಕೆ ಮತ್ತು ರಾಸಾಯನಿಕ ಪದಾರ್ಥಗಳು ಮಳೆ ನೀರಿನೊಂದಿಗೆ ಸೇರಿ ಕೆಂಗ್ರೆಹೊಳೆ ನೀರಿನ ಮೂಲ ಸೇರುತ್ತಿದೆ.
ಕೋಳಿಫಾರ್ಮ್ ತೊಳೆದ ನೀರನ್ನು ಸನಿಹದ ಗಟರಕ್ಕೆ ಬಿಡಲಾಗುತ್ತಿದೆ. ಕಲುಷಿತ ನೀರು ಕುಡಿಯುವ ನೀರಿಗೆ ಸೇರುವುದಲ್ಲದೆ. ಸ್ಥಳದಲ್ಲಿ ವಿಪರೀತವಾಸನೆ ಸಹಾ ಹರಡಿಕೊಂಡಿದೆ. ಪರಿಣಾಮ ಅಲವು ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ರಸ್ತೆ ಅಗಲೀಕರಣಕ್ಕೆಂದು ಪಕ್ಕದಲ್ಲಿ ಗಟಾರ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಹೊಲಸು ಸರಾಗವಾಗಿ ಜಲಮೂಲ ಸೇರುವಂತಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಭಾರೀ ಪ್ರಮಾಣದ ಹೊಸಲು ಹರಿಯುತ್ತಿದೆ.
ಕಾರಣ ಕೂಡಲೇ ತಾಲೂಕು ಆಡಳಿತ ಸ್ಥಳಪರಿಶೀಲನೆ ನಡೆಸಬೇಕು. ಅಲ್ಲದೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾಮಸ್ತರ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಹುಲೇಕಲ್ ಗ್ರಾ.ಪಂ. ಪೆÇಡಿಒ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಯಾವ ರೀತಿ ಕ್ರಮಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.