ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳು ಮಕ್ಕಳ ದಿನಾಚರಣೆ ಅಂಗವಾಗಿ ಬಣ್ಣ ಬಣ್ಣದ ಹೊಸಬಟ್ಟೆ ಧರಿಸಿ ಶಾಲೆಗೆ ಆಗಮಿಸಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಜೊತೆ ಹಾಡಿ ಕುಣಿದು ಸಂತೋಷ ಪಟ್ಟರು.
ಇಡೀ ಶಾಲೆಯ ಆವರಣ ಬಣ್ಣ ಬಣ್ಣದ ಹೂಗಳು ಅರಳಿದ ಹೂದೋಟದಂತೆ ಕಂಡು ಬರುತ್ತಿತ್ತು. ಎಲ್ಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಿಹಿಯನ್ನು ಹಂಚುತ್ತಾ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀ ಮಹಾಗಣಪತಿಯ ಸ್ತುತಿಯೊಂದಿಗೆ ಪ್ರಾರಂಭವಾದ ಮಕ್ಕಳ ದಿನಾಚರಣೆಯ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಲಯನ್. ಎನ್.ವಿ.ಜಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷಿಯ ನುಡಿಗಳಲ್ಲಿ ಎಲ್ಲಾ ಮಕ್ಕಳಿಗೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿಗಳ ಜವಾಬ್ದಾರಿಯ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು.
ಶಾಲಾ ಸಂಸತ್ತಿನ ಚುನಾವಣೆಯ ರೂಪುರೇಷೆಯ ಸಂಪೂರ್ಣ ವಿವರವನ್ನು ಶಾಲೆಯ ಮುಖ್ಯಶಿಕ್ಷಕ ಶಶಾಂಕ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಎಲ್ಲರನ್ನು ಸ್ವಾಗತಿಸಿದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವಕಾರ್ಯದರ್ಶಿ ಲಯನ್ ಪ್ರೋ. ರವಿ ನಾಯಕ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿ, ಪ್ರಜಾಪ್ರಭುತ್ವದ ಮಹತ್ವ ಹಾಗೂ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯ ಚಿತ್ರಣವನ್ನು ಮಕ್ಕಳಿಗೆ ನೀಡಿದರು. ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಲಿಯೋ ಕ್ಲಬ್ ಶಿರಸಿ ವಹಿಸಿಕೊಂಡಿತ್ತು. ಲಿಯೋ ಅಧ್ಯಕ್ಷೆ ಸ್ತುತಿ ತುಂಬಾಡಿ ಎಲ್ಲರನ್ನೂ ಸ್ವಾಗತಿಸಿದರು. ಲಿಯೋ ವಾಸವಿ ವಿ ಜೋಶಿ ಎಲ್ಲರನ್ನೂ ವಂದಿಸಿದರು. ಲಿಯೋ ಅಯನಾ ವಾಯ್. ಲಿಯೋ ಸುದರ್ಶನ ಜೋಷಿ ಉತ್ತಮವಾಗಿ ಕಾರ್ಯಕ್ರಮ ನಿರ್ವಹಿಸಿದರು.
ಶಾಲಾ ಸಂಸತ್ತಿನ ವಿದ್ಯಾರ್ಥಿ ಪ್ರತಿನಿಧಿಗಳ ಅಧ್ಯಕ್ಷರಾಗಿ ದಿವ್ಯಾ ವಿನಾಯಕ ಹೊಸಪಟ್ಟಣ, ಉಪಾಧ್ಯಕ್ಷರಾಗಿ ಭೂಮಿಕಾ ರಮೇಶ ಹೆಗಡೆ, ಶಾಲಾ ಶಿಸ್ತು ಪಾಲನಾ ಮಂತ್ರಿ ಮಧು ಶಿವಾನಂದ ಅಂಗಡಿ ಹಾಗೂ ಅಶ್ವಥನಾರಾಯಣ ಶ್ರೀಪಾದ ಭಟ್, ಕ್ರೀಡಾಮಂತ್ರಿ – ಶ್ರೀಲಕ್ಷ್ಮೀ ವಿಕ್ರಮ್ ಹೆಗಡೆ ಹಾಗೂ ವಿಭವ ರಾಜಾ ಭಾಗ್ವತ್, ಸ್ವಚ್ಛತಾ ಮಂತ್ರಿ – ಸುಜಲ್ ಶ್ರೀಧರ ಭಟ್ ಹಾಗೂ ಸೃಷ್ಠಿ ಪ್ರಹ್ಲಾದ ಗೌಳಿ, ಸಾಂಸ್ಕøತಿಕ ಮಂತ್ರಿ – ದಿಶಾ ಶ್ರೀಧರ ಹೆಗಡೆ, ಚಿನ್ಮಯ ನಿತ್ಯಾನಂದ ನಾಯ್ಕ, ಪ್ರಾರ್ಥನಾ ಮಂತ್ರಿ – ವಶಿಷ್ಠ ಕೃಷ್ಣಮೂರ್ತಿ ಭಟ್ ಹಾಗೂ ಸಾಚಿ ಪ್ರತಾಪ್ ಮುಳೆ, ಗ್ರಂಥಾಲಯ ಮಂತ್ರಿ – ಆದಿತ್ಯ ರಾಜೇಂದ್ರ ಜೋಶಿ, ಸುಪರ್ಣಾ ವಿನಯಕುಮಾರ ಹಿರೆಮಠ, ಆರೋಗ್ಯ ಮಂತ್ರಿ – ವಿನಾಯಕ ಬಸವರಾಜ ನಲ್ಲಿಕೊಪ್ಪ ಹಾಗೂ ಪ್ರಾರ್ಥನಾ ಪ್ರಸನ್ನ ಹೆಗಡೆ, ಪರಿಸರ ಮಂತ್ರಿ – ಸಿಂಚನಾ ಅಣ್ಣಪ್ಪ ರಾಯ್ಕರ್ ಮತ್ತು ಮನೀಷ್ ದಾಕು ಹೊಸಕಟ್ಟಾ, IT club- ಜಯಂತ್ ನಾಗಪತಿ ಹೆಗಡೆ ಹಾಗೂ ವಿನಯ ಶ್ರೀಹರಿ ಬೆಹೆರೆ, ಪ್ರಮುಖ ಗುಂಪುಗಳಾದ Saturn- ಕು. ತೈಬಾ ತಬಸುಮ್, Venus – ಕು. ಪ್ರೇಮ ಪ್ರಶಾಂತ ನಾಯ್ಕ, Jupiter – ಕು. ಗಗನ ಮಂಜುನಾಥ ನಾಯ್ಕ Mars – ಸಿಂಧು ನಾರಾಯಣ ಗಾಂವಕರ್ ಪ್ರಮಾಣ ವಚನ ಸ್ವೀಕರಿಸಿದರು.