ಕಾರವಾರ: ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ ಎಂದು ಪುರಸ್ಕೃತೆ ತುಳಸಿ ಗೌಡ ಅವರು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು.
ಪ್ರಶಸ್ತಿ ಪಡೆಯಲು ದೆಹಲಿಗೆ ತೆರಳಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ನಮಸ್ಕರಿಸಿದರು, ನಾನು ಅವರಿಗೂ ನಮಸ್ಕರಿಸಿದೆ. ಅವರ ಭಾಷೆ ನನಗೆ ಬರುವುದಿಲ್ಲ. ನನ್ನ ಭಾಷೆ ಅವರಿಗೆ ಬರುತ್ತಿರಲಿಲ್ಲ, ಆದರೂ ಮೋದಿ ಅವರಿಗೆ ಭೇಟಿಯಾಗಿದ್ದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನನ್ನ ಹಾಗೂ ನನ್ನ ಕುಟುಂಬದ ನಿರ್ವಹಣೆಗೆ ಒಂದು ಮನೆ, ಒಂದು ಬಾವಿ ಹಾಗೂ ನನ್ನ ಮೊಮ್ಮಗನಿಗೆ ಒಂದು ನೌಕರಿ ನೀಡುವಂತೆ ಒತ್ತಾಯ ಮಾಡಿದರು. ಯುವ ಪೀಳಿಗೆ ಗಿಡ-ಮರಗಳನ್ನು ನೆಡುವ ಕಾರ್ಯಕ್ಕೆ ಮುಂದೆ ಬರುಬೇಕು. ನಾನು ಕಾಡಿನಲ್ಲಿ ಸಾಕಷ್ಟು ಗಿಡ-ಮರಗಳನ್ನು ಬೆಳೆದಿದ್ದೇನೆ ಎಂದರು.