• Slide
    Slide
    Slide
    previous arrow
    next arrow
  • ಗಾಯತ್ರಿ ಗೆಳೆಯರ ಬಳಗದವತಿಂದ ಪುನಿತ್ ರಾಜಕುಮಾರ್ ಗೆ ನಮನ

    300x250 AD

    ಶಿರಸಿ: ಗಾಯತ್ರಿ ಗೆಳೆಯರ ಬಳಗದ ಸಭಾಭವನದಲ್ಲಿ ನಡೆದ ಪುನಿತ್ ರಾಜಕುಮಾರ್ ಗೆ ನಮನ ಕಾರ್ಯಕ್ರಮ ನಡೆಯಿತು. ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ವೃದ್ದಾಶ್ರಮ ಸೇರಿದಂತೆ ಅಸಹಾಯಕರಿಗೆ ಆಶ್ರಯದಾತರಾಗಿದ್ದ ಪುನಿತ್ ರಾಜಕುಮಾರ್ ಯಾರೂ ಮಾಡದ ಸಾಧನೆ ಮಾಡಿ ಅಗಲಿದ್ದಾರೆ. ಆರದ ನಂದಾದೀಪವಾಗಿ ದಾರಿದೀಪವಾಗಿದ್ದಾರೆ. ಇಂಥ ಸಾಧಕ ಸಾರ್ಥಕತೆಯ ಮೇರುಪರ್ವತದಂತಿದ್ದ ಪುನಿತ್ ರಾಜಕುಮಾರ್ ಜೀವನ ಎಲ್ಲರಿಗೆ ಮಾದರಿ. ಇದಕ್ಕಾಗಿ ನಾವು ಯುವಕರ ಪಡೆಯನ್ನು ಕಟ್ಟಿ ಜಾಗೃತಿಯನ್ನು ಮೂಡಿಸಿ ಸಮಾಜಕ್ಕೆ ಕೆಲಸ ಕಾರ್ಯಗಳಿಗೆ ಪ್ರೇರಣೆ ನೀಡಿದರೆ, ಅಪ್ಪುವಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಗಾಯತ್ರಿ ಗೆಳೆಯರ ಬಳಗದ ಸಂಘಟಕ ಪ್ರೊ. ಡಿ. ಎಂ. ಭಟ್ ಕುಳವೆ ಹೇಳಿದರು.

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಶಿರಸಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಪದಕಿ, “ನಾವು ಸಮಾಜಕ್ಕೆ ಏನನ್ನು ಕೊಟ್ಟಿದ್ದೇವೆ ಅನ್ನುವುದು ಮುಖ್ಯವೇ ಹೊರತು ಸಮಾಜ ನಮಗೇನು ನೀಡಿದೆ ಎಂಬುದು ಮುಖ್ಯವಲ್ಲ. ಅಪ್ಪುವನ್ನು ಕಳೆದುಕೊಂಡ ಕಲಾಪ್ರಪಂಚ ಕಲಾವೇದಿಕೆ ಕಳಾಹೀನವಾಗಿದೆ ನೆಯ ಸಾರ್ಥಕ್ಯದ ಬದುಕನ್ನು ಕಂಡ ಅವರ ವ್ಯಕ್ತಿತ್ವವನ್ನು ನಾವು ಆರಾಧಿಸಿ, ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಅದೇ ನಾವು ಅವರಿಗೆ ಸಲ್ಲಿಸುವ ನುಡಿನಮನ” ಎಂದರು.

    ಹಿರಿಯ ಸಾಹಿತಿ ವಿಕಾಸ ವಿಶ್ವಸ್ಥ ಮಂಡಳಿಯ ಸಂಸ್ಥಾಪಕ ಡಿ. ಎಸ್. ನಾಯ್ಕ, ಅಪ್ಪು ಇಂದು ಅಳಿದಿದ್ದರೂ ಉಳಿದಿದ್ದಾರೆ. ಅಳಿದವರ ಗುಣಗಾನವೇ ಸಾಧನೆಯ ಪುಟ. ಅಪ್ಪು ಒಂದು ಮಹಾಗ್ರಂಥ. ಆ ಗ್ರಂಥದ ನೆರಳಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಸೇವೆ ಮತ್ತು ಸಾಧನೆಗಳಿಂದ ಆತ್ಮ ಶಾಂತಿಯನ್ನು ಪಡೆಯಬೇಕು” ಎಂದರು.

    300x250 AD

    ಹೊAಗಿರಣ ಫೌಂಡೇಶನ್ ಸಂಸ್ಥಾಪರಕ ಡಾ. ಜಿ. ಎ ಹೆಗಡೆ ಸೋಂದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶೈಕ್ಷಣಿಕ ಜಿಲ್ಲೆ ಶಿರಸಿಯ ಅಧ್ಯಕ್ಷ ಮಹೇಶಕುಮಾರ ಹನಕೆರೆ, ಕವಯತ್ರಿ ಸಮೀಕ್ಷಾ ಫಾಯ್ದೆ, ಕಸಾಪ ಶಿರಸಿಯ ತಾಲೂಕಿನ ಮಾಜಿ ಅಧ್ಯಕ್ಷ ಮನೋಹರ ಮಲ್ಮನೆ, ಯಲ್ಲಾಪುರ ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ರೋಹಿಣಿ ಹೆಗಡೆ, ಪರಮ ಕಾಳೆಬೈಲು, ಯಶಸ್ವಿನಿ, ವಿಷ್ಣು ಅಂಬಿಗ, ಜಲಜಾಕ್ಷಿ ಶೆಟ್ಟಿ, ಮಂಗಳಾ ಜಿ, ಮಹೇಶಕುಮಾರ, ರಮೇಶ ಹೆಗಡೆ ಕೆರೆಕೋಣ, ದಾಕ್ಷಾಯಿಣಿ ಪಿ. ಸಿ. , ಭವ್ಯಾ ಹಳೆಯೂರು ತಮ್ಮ ಸ್ವರಚಿತ ಕವನಗಳ ಮೂಲಕ ಅಗಲಿದ ನಟ ಪುನೀತರಿಗೆ ನುಡಿನಮನ ಸಲ್ಲಿಸಿದರು. ಶರದಿ ಫಾಯ್ದೆ ಪ್ರಾರ್ಥನೆ ಮಾಡಿದರು. ಕಥೆಗಾರ ರಾಜು ನಾಯ್ಕ್ ಸ್ವಾಗತಿಸಿದರು, ಯಶಸ್ವಿನಿ ಶ್ರೀಧರಮೂರ್ತಿ ವಂದಿಸಿದರು. ರಾಜು ಉಗ್ರಾಣಕರ ಪುನೀತ ರಾಜಕುಮಾರ ಹಾಡಿದ ಹಾಡನ್ನು ಹಾಡಿ ನುಡಿನಮನ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top