• first
    second
    third
    previous arrow
    next arrow
  • ನಗರದಲ್ಲಿ ರಸ್ತೆ ದುರಸ್ಥಿಗೆ ನಾಗರಿಕರ ಒತ್ತಾಯ

    300x250 AD

    ಶಿರಸಿ: ನಗರದ 17ನೇ ವಾರ್ಡಿನ ಮೊದಲನೇ ಕ್ರಾಸ್ ನಲ್ಲಿ ರಸ್ತೆ ತುಂಬಾ ಹದಗೆಟ್ಟಿದ್ದು ವಾಹನ ಸಂಚಾರ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.


    ಅನೇಕ ಹಿರಿಯ ನಾಗರಿಕರು ಇಲ್ಲಿ ವಾಸವಾಗಿದ್ದು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವಾಗ ಬಿದ್ದು ಗಾಯ ಗೊಂಡು ನೋವನ್ನು ಅನುಭವಿಸಿದ ಅನೇಕ ಉದಾಹರಣೆಗಳು ಇದೆ. ಇಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಇನ್ನು ಈ ವಾರ್ಡಿನ ರಸ್ತೆ ಪಕ್ಕ ಒಂದೇ ಗಟಾರ್ ನಿರ್ಮಾಣ ಮಾಡಲಾಗಿದ್ದು ಇನ್ನೊಂದು ಬದಿಯಲ್ಲಿ ಗಟಾರ್ ನಿರ್ಮಾಣ ಮಾಡಿಲ್ಲ. ಆ ಗಟಾರ್ ದಲ್ಲಿ ಹೋಗಬೇಕಾದ ನೀರು ರಸ್ತೆಯ ಮೇಲೆ ಹರಿಯುವ ದಲ್ಲದೆ ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಈ ಪ್ರದೇಶದ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಸುರಕ್ಷತಾ ದೃಷ್ಟಿಯಿಂದ ಈ ಬಗ್ಗೆಯೂ ನಗರಸಭೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top