• Slide
    Slide
    Slide
    previous arrow
    next arrow
  • ಮಣ್ಮನೆಯಲ್ಲಿ ನಮ್ಮೂರ ಹಬ್ಬ; ಸಾಧಕರಿಗೆ ಸಮ್ಮಾನ, ಸಾಂಸ್ಕೃತಿಕ, ಸ್ಪರ್ಧಾ ಸಂಭ್ರಮಕ್ಕೆ ತೆರೆ

    300x250 AD


    ಶಿರಸಿ: ಎರಡು ದಿನಗಳ ಕಾಲ ನಡೆಸಲಾದ ನಮ್ಮೂರ ಹಬ್ಬ ತಾಲೂಕಿನ ಕೋಡ್ನಗದ್ದೆ ಗ್ರಾಮ ಪಂಚಾಯ್ತಿ ವ್ತಾಪ್ತಿಯ ಮಣ್ಮನೆಯಲ್ಲಿ ಸಂನ್ನಗೊಂಡಿತು. ಸಾಧಕರಿಗೆ ಸಮ್ಮಾನ, ಸಾಂಸ್ಕೃತಿಕ, ಸ್ಪರ್ಧಾ ಕಾರ್ಯಕ್ರಮಗಳ ಸಂಭ್ರಮದ ಮೂಲಕ ನಿಸರ್ಗ ನಡುವಿನ ರಂಗಭೂಮಿಯಲ್ಲಿ ತೆರೆ ಕಂಡಿತು.


    ಬೆಳಿಗ್ಗೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಪರಿಸರದ ಕುರಿತಾದ ಚಿತ್ರಕಲಾ ಸ್ಪರ್ಧೆ, ಸಂಗೀತ ಕುರ್ಚಿ ಮತ್ತು ಒಂದೇ ಒಂದು ನಿಮಿಷ ಸ್ಪರ್ಧೆಗಳಲ್ಲಿ ಮಕ್ಕಳು ಸಂಭ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರಿಗೆ ಸಂಪ್ರದಾಯದ ಹಾಡು ಮತ್ತು ರಂಗವಲ್ಲಿ, ಸಂಗೀತ ಖುರ್ಚಿ ಮತ್ತು ಒಂದೇ ಒಂದು ನಿಮಿಷ ಸ್ಪರ್ಧೆಗಳು ನಡೆದಿದ್ದು ಎಲ್ಲ ವಯೋಮಾನದವರೂ ಭಾಗವಹಿಸಿ ಬಹುಮಾನ ಪಡೆದುಕೊಂಡರು.ನಿರ್ಣಾಯಕರಾಗಿ ರಾಮಚಂದ್ರ ಭಟ್ಟ ಶಿರಳಗಿ, ಗಾಯತ್ರೀ ರಾಘವೇಂದ್ರ, ಭುವನೇಶ್ವರಿ ಜೋಶಿ, ಜಾನಕಿ ಭಟ್ಟ ಪಾಲ್ಗೊಂಡರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಿ ಎಸ್ ಭಟ್ಟ ಬೋಳ್ಮಠ ತಂಡದಿಂದ ಭಜನಾ ಕಾರ್ಯಕ್ರಮಗಳು ನಡೆದವು.


    ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಹುಲೇಕಲ್ ವಲಯಾರಣ್ಯ ಅಧಿಕಾರಿ ಮಂಜುನಾಥ ಹೆಬ್ಬಾರ, ಇಂಥ ನಮ್ಮೂರ ಹಬ್ಬಗಳು ಎಲ್ಲಡೆ ಆಗುವ ಮೂಲಕ ಹಳ್ಳಿ ಹಳ್ಳೀಗಳಲ್ಲಿ ಸಾಂಘಿಕ ಶಕ್ತಿ ವೃದ್ಧಿಸುತ್ತವೆ ಎಂದರು. ಉ ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ, ಧರ್ಮ ಮತಾಂತರ ಕೇಳಿದ್ದೆವು. ಆದರೆ, ಈಗ ಜಾತಿ ಜಾತಿಗಳು ವಿಲೀನಗೊಂಡು ಹೊಸ ಸಂಸ್ಕೃತಿ ಬರುತ್ತಿದೆ ಎಂದರು.


    ಉದಯವಾಣಿ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ, ಯಕ್ಷಗಾನ ಅಕಾಡೆಮಿಗೆ ಶೀಘ್ರ ಅಧ್ಯಕ್ಷರ ನೇಮಕತಾಗಿ ಆಗಬೇಕು. ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಸರಕಾರ ಇನ್ನಷ್ಟು ಮಹತ್ವ ನೀಡಬೇಕು ಎಂದರು. ಸೊಸೈಟಿ ನಿರ್ದೇಶಕಿ ಭಾಗೀರಥಿ ಹೆಗಡೆ ಪಾಲ್ಗೊಂಡು ಮಾತನಾಡಿದರು.

    300x250 AD


    ಸಂಪ್ರದಾಯದ ಹಾಡುಗಳನ್ನು ರಚಿಸುವ ಮತ್ತು ಹಾಡುವದರಲ್ಲಿ ಸಾಧನೆ ಮಾಡಿದ ಅನಸೂಯಾ ಭಟ್ಟ ಗೋಪನಮರಿ, ಕೃಷಿ ಪದವಿಯಲ್ಲಿ ಹದಿಮೂರು ಚಿನ್ನದ ಪದಕ ಪಡೆದ ಶರತ್ ಕೊಠಾರಿ, ಉತ್ತರ ಕನ್ನಡ ಜಿಲ್ಲೆಯ ಸಂಪ್ರದಾಯದ ಚಿತ್ರಕಲೆಯ ಕುರಿತಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ ಎಚ್ ಡಿ ಪದವಿ ಪಡೆದ ಜೋತಿ ಭಟ್ಟರ ಅಪರವಾಗಿ ಅವರ ತಾಯಿಗೆ ಸಮ್ಮಾನ ಮಾಡಲಾಯಿತು. ನಾಗರಜ್ ಜೋಶೊ ಪ್ರಾಸ್ತಾವಿಕ ಮಾತನಾಡಿದರು. ನವ್ಯಾ ಭಟ್ಟ ಸಮ್ಮಾನ ಪತ್ರ ವಾಚಿಸಿದರು. ಸಹನಾ ಭಟ್ಟ, ನವ್ಯ ಭಟ್ಟ ಬಹುಮಾನ ಘೋಷಿಸಿದರು. ಸುರೇಖಾ ಹೆಗಡೆ ವಂದಿಸಿದರು. ಅರುಣಕುಮಾರ ಭಟ್ಟ, ನಮ್ಮೂರ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ ಹೆಗಡೆ ಮಣ್ಮನೆ ನಿರ್ವಹಿಸಿದರು.


    ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮಳೆಯ ಕಾರಣದಿಂದ ಸಿದ್ಧಿವಿನಾಯಕ ಕಲಾಮಂಡಳಿ ಗದ್ದೇಹಳ್ಳಿ ದಮಾಮಿ ಕುಣಿತ, ಸಾಕ್ಷಿ ಹೆಗಡೆ ಅಲ್ಲಾಳಮನೆ ಸಂಗಡಿಗರಿಂದ ಭಾವಗೀತೆ ಪಕ್ಕದ ಮಾರಿಕಾಂಬಾ ದೇವಾಲಯದ ಎದುರು ನಡೆಯಿತು. ನಮ್ಮೂರ ಹಬ್ಬದ ಯಶಸ್ಸಿಗೆ ಅನಂತ ಆಚಾರಿ, ಗಣೇಶ ಭಟ್ಟ, ಸಿಂಧೂರ ಮಡಿವಾಳ, ಗಣಪತಿ ಚೆಲುವಾದಿ, ಗಣಪತಿ ಗೌಡ, ಪದ್ಮನಾಭ ಹೆಗಡೆ ಇತರರು ಕೆಲಸ ಮಾಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top