ಕಾರವಾರ: ಕಾಂಗ್ರೆಸ್ ಬಳಿ ಹೇಳಿಕೊಳ್ಳುವಂಥ ಯಾವುದೇ ವಿಷಯವಿಲ್ಲ. ಈ ಕಾರಣದಿಂದ ಬಿಟ್ ಕಾಯಿನ್ ಬಗ್ಗೆ ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ನಾಯಕ ಅವರು ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಟ್ ಕಾಯಿನ್ ಕಾಲ್ಪನಿಕ ಹಣ. ಅದೇ ರೀತಿ ಕಾಂಗ್ರೆಸ್ ಸಹ ರಾಜ್ಯ ಸರಕಾರದ ಮೇಲೆ ಕಾಲ್ಪನಿಕ ಆರೋಪ ಮಾಡುತ್ತಿದೆ.
ಬಿಟ್ ಕಾಯಿನ್ ಅಧಿಕೃತವಾಗಿ ಚಲಾವಣೆಯಲ್ಲಿ ಇಲ್ಲದ ಡಿಜಿಟಲ್ ಕಾಯಿನ್, 2011ರಲ್ಲಿ ಬಿಟ್ ಕಾಯಿನ್ ಎನ್ನುವುದು ಜಾಗತಿಕ ಮಟ್ಟದಿಂದ ಬಂದಿದೆ. ಈ ಕ್ರಿಪ್ಟೋ ಕರೆನ್ಸಿ ಅಕ್ರಮ ವ್ಯವಹಾರಗಳಿಗೆ ಬಳಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಮಾದಕ ಜಾಲ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಈ ಪ್ರಕರಣದಲ್ಲಿ ಬಂಧಿತ ಶ್ರೀಕೃಷ್ಣ ಎಂಬಾತ ವ್ಯಕ್ತಿ ಅಕೌಂಟನ್ನು ಹ್ಯಾಕ್ ಮಾಡಲು ಪ್ರಾರಂಭಿಸಿದ್ದ ಹಿನ್ನೆಲೆಯಲ್ಲಿ ಸೈಬರ್ ಕ್ರೆöÊಂ ಮೂಲಕ ದೂರು ದಾಖಲಾಗಿದೆ. ಇದೀಗ ತನಿಖೆ ಮುಂದುವರೆದಿದ್ದು ಆರೋಪಿ ಶ್ರೀಕೃಷ್ಣ ನೇ ಈ ಬಗ್ಗೆ ಹೇಳಿಕೆ ನೀಡಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಈ ಹಿಂದೆ ರಫೆಲ್ ಭ್ರಷ್ಟಾಚಾರ ಹಗರಣವನ್ನ ಕೃತಕವಾಗಿ ಹುಟ್ಟಿಸಿ ಬಳಿಕ ನ್ಯಾಯಾಲಯದಿಂದ ಕಾಂಗ್ರೆಸ್ಸಿಗರು ಛೀಮಾರಿ ಹಾಕಿಸಿಕೊಂಡು ಸುಮ್ಮನ್ನಾಗಿದ್ದರು. ಈಗ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಂದು ಹೇಳಿದ್ದಾರೆ.