ಶಿರಸಿ: ತಾಲೂಕಿನಲ್ಲಿ ಮುಂದುವರೆದ ಮಳೆಯಿಂದ ಕಟಾವು ಮಾಡಿದ ಭತ್ತದ ಗದ್ದೆಗಳಲ್ಲಿ ಮಳೆ ನೀರು ತುಂಬಿಕೊAಡು, ಭತ್ತ, ಭತ್ತದ ಹುಲ್ಲು ಸಂಪೂರ್ಣವಾಗಿ ಮಳೆ ನೀರಿಗೆ ಆಹುತಿಯಾಗಿದೆ. ಸುರಿಯುವ ಮಳೆಯಲ್ಲೇ ರೈತರು ಗದ್ದೆಯಲ್ಲಿ ನೀರು ಹೊರಹೋಗಲು ದಾರಿ ಮಾಡಿಕೊಡುತ್ತಿದ್ದು, ಗದ್ದೆಯಲ್ಲಿನ ನೀರು ಹೊರಹಾಕುವ ಕಾರ್ಯ ನಡೆಯುತ್ತಿದೆ.
ರೈತರಿಗೆ ನಷ್ಟದ ಜೊತೆಗೆ ಸಂಕಷ್ಟ ಎದುರಾಗಿದ್ದು. ಐಗೋಡಿನ ತಿಮ್ಮ ನಾಯ್ಕ, ಜಗದೀಶ ದ್ಯಾವ ನಾಯ್ಕ ಎನ್ನುವವರ ಗದ್ದೆಯಲ್ಲಿನ ಭತ್ತ ಒದ್ದೆಯಾಗಿ ಅಪಾರ ನಷ್ಟ ಉಂಟಾಗಿದೆ. ವರ್ಷ ಪೂರ್ತಿ ಕುಟುಂಬದವರೆಲ್ಲ ಸೇರಿ ದುಡಿದು ಬೆಳೆಯುವ ಬೆಳೆಯು ಕೈಗೆ ಸಿಗುವ ಸಂದರ್ಭದಲ್ಲಿ ಮಳೆಯಿಂದ ಹಾಳಾಗಿದ್ದು, ಕಟಾವು ಮಾಡಿ ಒಣ ಹಾಕಿದ ಗದ್ದೆಯಲ್ಲಿ ನೀರು ತುಂಬಿಕೊAಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಪರಿಹಾರ ನೀಡಿ ರೈತರನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.