ಶಿರಸಿ: ಇಲ್ಲಿಯ ಶ್ರೀ ಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮಂಗಲಾ ನಾಯ್ಕ ಅವರ ಹುಟ್ಟುಹಬ್ಬವನ್ನು ಚಾರಿಟೇಬಲ್ ಟ್ರಸ್ಟ್ ಹಾಗೂ ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕಪಡೆದ ಬಿಸಲಕೊಪ್ಪ, ದಾಸನಕೊಪ್ಪ, ಅಂಡಗಿ ಹಾಗೂ ಬಿಳೂರು ಪ್ರೌಢಶಾಲೆಗಳ 28 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತಲ್ಲದೆ, ಈ ಎಲ್ಲ ಪ್ರೌಢಶಾಲೆಗಳ ಒಟ್ಟೂ 34 ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ಅವರ ಜೊತೆಗಿರುವವರಿಗೆ ಆಹಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ನಗರದ ಶ್ರೀ ಗಣೇಶ ನೇತ್ರಾಲಯದಲ್ಲಿ ಮಂಗಲಾ ನಾಯ್ಕ ಹಾಗೂ ಕೇಶವ ಎಂ. ನಾಯ್ಕ ಅವರು ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿದರು. ಅಂಡಗಿ ಮಠದ ಆವರಣದ ಸುತ್ತಲು 25ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಡಲಾಯಿತು.