ಕಾರವಾರ: ಇಂದಿನಿಂದ ಮತ್ತೆ ಮೂರು ದಿನ ರಾಜ್ಯದ ಹಲವೆಡೆ ವ್ಯಾಪಕ ಗುಡುಗು ಸಹಿತ ಮಳೆಯಾಗಲಿದೆ. ಎರಡು ದಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಎರಡು ದಿನಗಳ ಬಳಿಕ ಯೆಲ್ಲೋ ಅಲರ್ಟ್ ಆಗಲಿದೆ. ಇನ್ನುಳಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಚಾಮರಾಜನಗರ, ದಾವಣಗೆರೆ, ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಹಾಕಲಾಗಿದೆ.
ಅಕಾಲಿಕ ಮಳೆಗೆ ಬೆಳೆ ಹಾನಿ: ಕಳೆದ ಮೂರು ದಿನಗಳಿಂದ ಮೋಡ ಕವಿದ ವಾವಾವರಣ ಮತ್ತು ಆಗಾಗ ಸುರಿಯುತ್ತಿರೋ ಜಿನುಗು ಅಕಾಲಿಕ ಮಳೆ ಮತ್ತು ತಂಪಾದ ವಾತಾವರಣದಿಂದ ಅನ್ನದಾತ ಕಂಗಾಲು ಆಗಿದ್ದಾನೆ. ಅಡಿಕೆ ಬೆಳೆಗಾರರು ಕೊನೆ ಕೊಯ್ದು, ಅಡಿಕೆ ಒಣಗಿಸುವಲ್ಲಿ ಕಂಗಾಲಾಗಿದ್ದರೆ, ಭತ್ತದ ಗದ್ದೆಯು ನೀರಲ್ಲಿ ತೇಲುತ್ತಿದೆ. ಅಡಿಕೆಗೆ ಉತ್ತಮ ಬೆಲೆ ಇರೋ ಇಂತಹ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಕಷ್ಟದಲ್ಲಿದ್ದಾರೆ.