ಮುಂಡಗೋಡ: ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊರಟವರೇ, ಬಾರದ ಲೋಕಕ್ಕೆ ತೆರಳಿದ ಘಟನೆ ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ನಡೆದಿದೆ.
ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಕಾರೊಂದು ಮುಳುಗಿ, ಕಾರಿನಲ್ಲಿದ್ದ ಇಬ್ಬರೂ ಮೃತಪಟ್ಟ ಘಟನೆ ಸೋಮವಾರ ನಸುಕಿನಲ್ಲಿ ಜರುಗಿದೆ. ರಾಜು ವರ್ಗೀಸ್ ಹಾಗೂ ಬ್ಲೆಸ್ಸಿ ಮೃತರಾಗಿದ್ದಾರೆ. ಮೂಲತಃ ಅರಿಶಿಣಗೇರಿಯವರಾದ ಇಬ್ಬರೂ, ಬೆಂಗಳೂರಿನಲ್ಲಿ ನೆಲೆಸಿದ್ದರು. ಕರವಳ್ಳಿಯಲ್ಲಿ ಸಂಬಂಧಿಕರೊಬ್ಬರು ತೀರಿಕೊಂಡಿದ್ದರಿಂದ ಅವರ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬರುತ್ತಿರುವಾಗ, ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೀರಿನಲ್ಲಿ ಮುಳುಗಿದೆ. ಇಬ್ಬರೂ ಸಾವನ್ನಪ್ಪಿದ್ದಾರೆ.
ಸಿಪಿಐ ಸಿದ್ಧಪ್ಪ ಸಿಮಾನಿ, ಪಿಎಸ್‍ಐ ಬಸವರಾಜ ಮಬನೂರ, ಪಿಎಸ್‍ಐ ಎನ್.ಡಿ.ಜಕ್ಕಣ್ಣವರ್, ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹಾಗೂ ಕಾರು ಹೊರತೆಗೆದರು. ಭೀಕರ ಘಟನೆ ನೆರೆದವರ ಮನ ಕಲುಕಿತು.