ಸಿದ್ದಾಪುರ: ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ, ಶ್ರೀ ಲಕ್ಷ್ಮೀನರಸಿಂಹ ರಥೋತ್ಸವ ಸಾಂಸ್ಕೃತಿಕ ಸಮಿತಿ, ತ್ಯಾಗಲಿ-ಹಂಗಾರಖಂಡ ಇವರು ಆಯೋಜಿಸುತ್ತಿರುವ ಅಮೋಘ 8ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ತ್ಯಾಗಲಿಯಲ್ಲಿ ನ.22 ಸೋಮವಾರ ಸಂಜೆ 6.30 ರಿಂದ ‘ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆ’ಯಲ್ಲಿ ನಡೆಯಲಿದೆ.
ಪ್ರಥಮವಾಗಿ ಅಂಗನವಾಡಿಯಿಂದ 7ನೇ ಮಕ್ಕಳವರೆಗಿನ ಚಿಕ್ಕ ಮಕ್ಕಳ ಕಾರ್ಯಕ್ರಮ, ನಂತರ ಪ್ರಶಾಂತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಂತರ 8.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಲಕ್ಷ್ಮೀ ನರಸಿಂಹ ರಥೋತ್ಸವ ಸಾಂಸ್ಕೃತಿಕ ಸಮಿತಿ, ತ್ಯಾಗಲಿ-ಹಂಗಾರಖಂಡದ ಅಧ್ಯಕ್ಷ ಎಮ್. ಡಿ. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕಾರ್ಮಿಕ ಇಲಾಖೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕ್, ಶಿರಸಿ ಅಧ್ಯಕ್ಷ ಶಿವರಾಮ ಹೆಬ್ಬಾರ,
ಧಾರವಾಡ ಹಾಲು ಒಕ್ಕೂಟ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ತ್ಯಾಗಲಿ ಗ್ರೂಪ್ ಸೇವಾ ಸಹಕಾರಿ ಸಂಘ ನಾಣಿಕಟ್ಟಾದ ಅಧ್ಯಕ್ಷ ಎನ್.ಬಿ ಹೆಗಡೆ, ಖ್ಯಾತ ಉದ್ಯಮಿ, 7 ಸ್ಟಾರ್ ಇಂಡಸ್ಟ್ರೀಸ್ ಕಾನಸೂರಿನ ಆರ್.ಜಿ ಶೇಟ್ ಇರುವರು.
ಗ್ರಾಮ ಪಂಚಾಯತ ತ್ಯಾಗಲಿ ಅಧ್ಯಕ್ಷ ಲಕ್ಷ್ಮೀನಾರಾಯಣ ಎಮ್. ಹೆಗಡೆ, ಗೋಪಾಲ ಹೆಗಡೆ ವಾಜಗದ್ದೆ, ಸುಬ್ರಾಯ ಹೆಗಡೆ ತೇರಗಡ್ಡೆ, ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ತ್ಯಾಗಲಿ ಧರ್ಮದರ್ಶಿ ಗಣಪತಿ ರಾ ಹೆಗಡೆ, ಗ್ರಾ.ಪಂ ಸದಸ್ಯ ಗಣಪತಿ ಹೆಗಡೆ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರ್ವಶ್ರೀ ಕೃಷ್ನಾಜೀ ಬೇಡ್ಕಣಿ ಮತ್ತು ಹಿರಿಯ ಯಕ್ಷ ಕಲಾವಿದ ಸರ್ವಶ್ರೀ ಅಶೋಕ ಭಟ್ಟ ಸಿದ್ದಾಪುರ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9.30 ರಿಂದ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಗೇರುಸೊಪ್ಪ ಹೊನ್ನಾವರ ಹಾಗೂ ದಿಗ್ಗಜ ಅತಿಥಿ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ‘ಚಕ್ರ ಚಂಡಿಕೆ'(ವೀರ ಬರ್ಬರೀಕ) ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ರಾಘು ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ, ಹಿಲ್ಲೂರು, ಸುನೀಲ್ ಬಂಡಾರಿ, ಸುಜನ್ ಹಾಲಾಡಿ ರಾಮ & ರಾಘವ ಅವರ ದ್ವಂದ್ವ ಹಾಡುಗಾರಿಕೆ.
ಮುಮ್ಮೇಳದಲ್ಲಿ- ಸುಬ್ರಮಣ್ಯ ಚಿಟ್ಟಾಣಿ, ಅಶೋಕ ಭಟ್ಟ ಸಿದ್ದಾಪುರ, ಗಣೇಶ ನಾಯ್ಕ ಮುಗ್ವಾ, ಶ್ರೀಧರ ಭಟ್ಟ ಕಾಸರಕೋಡ, ಸಂಜಯ ಬಿಳಿಯೂರು, ಕಾರ್ತಿಕ ಚಿಟ್ಟಾಣಿ, ವಿನಯ ಬೇರೊಳ್ಳಿ, ಗುರು ಕಡತೋಕ, ನಾಗರಾಜ ಕುಂಕಪಾಲ್, ಪುರಂದರ ಮೂಡ್ಕಣಿ, ದೀಪಕ ಕುಂಕಿಪಾಲ್, ನಾಗೇಶ ಕುಳಿಮನೆ, ಮಂಜುಗೌಡ ಮುಂತಾದ ಕಲಾವಿದರು ರಂಗದಲ್ಲಿ ಇರುವರು.
ಪ್ರವಾದನ-ಉದಯ ಆಡುಕಳ ಮಂಕಿ, ಧ್ವನಿ, ಬೆಳಕು & ರಂಗಸಜ್ಜಿಕೆಯಲ್ಲಿ ಕೃಷ್ಣ ಮ್ಯೂಸಿಕ್ಸ್, ಹೊಸಾಡು, ಹೊನ್ನಾವರ ಸಹಕರಿಸುವರು.