• first
  second
  third
  previous arrow
  next arrow
 • ಹೃದಯಾಘಾತದಿಂದ ತಬಲಾ ವಾದಕ ಗಜಾನನ ಗಿಳಿಗುಂಡಿ ವಿಧಿವಶ

  300x250 AD

  ಧಾರವಾಡ: ಧಾರವಾಡದ ಕಲ್ಯಾಣ ನಗರದ, ತಬಲಾ ವಾದಕ ಗಜಾನನ ಹೆಗಡೆ ಗಿಳಿಗುಂಡಿ ಅವರು ರವಿವಾರ ಬೆಳಗ್ಗೆ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

  300x250 AD


  ಅವರಿಗೆ 58 ವರ್ಷ ವಯಸ್ಸಾಗಿತ್ತು. ಬಾಲಬಳಗ ಶಾಲೆಯಲ್ಲಿ ತಬಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಇವರು ಇವರು ಹೆಂಡತಿ, ಸಹೋದರ, ಸಹೋದರಿಯರು ಮತ್ತು ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ.
  ಹಿಂದುಸ್ತಾನಿ ತಬಲಾ ಕಲಾವಿದರು ಹಾಗೂ ತಬಲಾ ಗುರುಗಳಾಗಿದ್ದ ಅವರು ಅನೇಕ ಕಲಾವಿದರಿಗೆ ಸಂಗೀತ ಕಛೇರಿಗಳಲ್ಲಿ ನೂರಾರು ಹಿರಿಯ-ಕಿರಿಯ ಕಲಾವಿದರಿಗೆ ತಬಲಾ ಸಾಥ್ ನೀಡಿದ್ದರು. ಮೂಲತಃ ಶಿರಸಿ ತಾಲೂಕಿನ ಗಿಳಿಗುಂಡಿಯವರಾದ ಇವರು ಕಳೆದ 25 ವರ್ಷಗಳಿಂದ ಧಾರವಾಡದಲ್ಲಿ ತಬಲಾ ಶಿಕ್ಷಕರಾಗಿ ಸಂಗೀತ ಸೇವೆ ಮಾಡುತ್ತಿದ್ದರು. ತಬಲಾ ವಿದ್ಯಾರ್ಥಿಗಳ ಮಟ್ಟಿಗೆ ಅವರು ತಬಲಾ ಮಾಮಾ ಎಂದೇ ಪ್ರಖ್ಯಾತರಾಗಿದ್ದರು. ಇವರ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ತಿಳಿಸಲಾಗಿದೆ.

  Share This
  300x250 AD
  300x250 AD
  300x250 AD
  Back to top