ಶಿರಸಿ: ಅಡಿಕೆ ಮತ್ತು ಕಾಳುಮೆಣಸನ್ನು ನೇರ ಖರೀದಿ ವ್ಯವಸ್ಥೆ ಅಡಿಯಲ್ಲಿ ಖರೀದಿಸಲು ಪ್ರಯತ್ನ ನಡೆಸಲಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ತಿಳಿಸಿದರು.
ನಗರದ ಟಿ ಎಂಎಸ್ ಸಭಾಭವನದಲ್ಲಿ ನಡೆದ ಸಂಘದ 37 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು ಮುಂಬರುವ ದಿನದಲ್ಲಿ ಸದಸ್ಯರ ಆರ್ಥಿಕ ಉನ್ನತಿಗಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಗಾರರು ಹೆಚ್ಚುತ್ತಿದ್ದು, ಅಡಿಕೆ ಆವಕ ಮತ್ತು ಶಿಲ್ಕು ಇಡುವವರ ಸಂಖ್ಯೆ ಸಹಾ ಹೆಚ್ಚುತ್ತಿದೆ. ಹೀಗಾಗಿ ಗೂಡಾನ್ ಸಮಸ್ಯೆ ಎದುರಾಗಿದೆ. ಈಗಾಗಲೇ ಹೊಸ ಗೋಡಾನ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಪಿ. ಹೆಗಡೆ ಹೊನ್ನೆಕಟ್ಟಾ, ನಿರ್ದೇಶಕ ಜಿ.ಟಿ. ಹೆಗಡೆ ತಟ್ಟಿಸರ, ಜಿ.ಎಂ. ಹೆಗಡೆ ಮುಳಖಂಡ, ಎನ್ ಡಿ. ಹೆಗಡೆ ಇದ್ದರು