• Slide
    Slide
    Slide
    previous arrow
    next arrow
  • ನ.16 ರಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರಿಗೆ ಅವಕಾಶ

    300x250 AD

    ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲವು ಇದೇ ನ. 16 ರಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ. ಪ್ರತಿ ವರ್ಷದ ವಾಡಿಕೆಯಂತೆ ಈ ವರ್ಷವೂ ಎರಡು ತಿಂಗಳು ದೇಗುಲ ದರ್ಶನಕ್ಕೆ ಅವಕಾಶ ನೀಡಲಾಗಿದೆ.

    ಈ ವೇಳೆ ನಿತ್ಯ ಸುಮಾರು 30 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    300x250 AD

    ನ.15ರಂದು ಸಂಜೆ ಐದಕ್ಕೆ ದೇವಸ್ಥಾನದ ಬಾಗಿಲು ತೆರೆಯಲಿದೆ. ನ.16ರಂದು ಧಾರ್ಮಿಕ ಯಾತ್ರಾ ಅವಧಿ ಆರಂಭವಾಗಲಿದೆ. ಮುಖ್ಯ ಅರ್ಚಕ ಕಂದರಾರು ಮಹೇಶ್ ಮೋಹನರಾರು ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿಕೆ ಜಯರಾಜ್ ಪುಟ್ಟಿ ದೇಗುಲದ ಬಾಗಿಲು ತೆರೆಯಲಿದ್ದಾರೆ.

    ಇದೇ ದಿನ ಅಯ್ಯಪ್ಪ ಮತ್ತು ಮಲ್ಲಿಕಪುರಂ ದೇವಸ್ಥಾನಗಳಿಗೆ ನೂತನ ಅರ್ಚಕರ ನೇಮಕ ಕಾರ್ಯಕ್ರಮವು ಬೆಟ್ಟದಲ್ಲಿ ನಡೆಯಲಿದೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್ ನಿಯಮಗಳ ಅನುಸಾರವೇ ನಡೆಸಲಾಗುತ್ತದೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top