Slide
Slide
Slide
previous arrow
next arrow

ಪ್ರಥಮ ಬಾರಿಗೆ ಕಾಮನ್‍ವೆಲ್ತ್-2022 ಗೇಮ್ಸ್’ನಲ್ಲಿ ಮಹಿಳಾ ಕ್ರಿಕೆಟ್ ಪಂದ್ಯ ಆಯೋಜನೆ

300x250 AD


ಬೆಂಗಳೂರು: 2022 ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಪಂದ್ಯ ಆಯೋಜನೆಗೊಳ್ಳಲಿದೆ.

ಜುಲೈ 29 ರಂದು 2022 ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಮಹಿಳಾ ಕ್ರಿಕೆಟ್ ಪಾದಾರ್ಪಣೆ ಮಾಡುತ್ತಿದ್ದು, ಭಾರತವು ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಆಗಸ್ಟ್ 7 ರಂದು ನಡೆಯಲಿದೆ.

ಇದರ ಆಯೋಜಕರು ನಿನ್ನೆ ಟಿ20 ಮಾದರಿಯೊಂದಿಗೆ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಮಹಿಳಾ ಕ್ರಿಕೆಟ್ ಪಾದಾರ್ಪಣೆ ಮಾಡುತ್ತಿದೆ ಎಂದು ಘೋಷಿಸಿದ್ದಾರೆ.

300x250 AD

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿ, ಜುಲೈ 29 ರಿಂದ ಎಡ್ಜ್‍ಬಾಸ್ಟನ್ ಸ್ಟೇಡಿಯಂನಲ್ಲಿ ಮಹಿಳಾ ಕ್ರಿಕೆಟ್ ಟಿ 20 ಸ್ಪರ್ಧೆ ನಡೆಯಲಿದ್ದು, ಆಗಸ್ಟ್ 7 ರಂದು ಕಂಚು ಮತ್ತು ಚಿನ್ನದ ಪದಕದ ಪಂದ್ಯಗಳು ನಡೆಯಲಿವೆ.

ಜುಲೈ 31 ರಂದು ಭಾರತ ಪಾಕಿಸ್ತಾನವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಕೂಡ ಆಗಸ್ಟ್ 3 ರಂದು ಪಾಕಿಸ್ತಾನವನ್ನು ಎದುರಿಸಲಿದೆ.
ನ್ಯೂಸ್ 13

Share This
300x250 AD
300x250 AD
300x250 AD
Back to top