• first
    second
    third
    previous arrow
    next arrow
  • ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಪೊಲೀಸ್ ಇಲಾಖೆ ಪದೋನ್ನತಿಯಲ್ಲಿ ಅನ್ಯಾಯ; ರಾಜ್ಯಪಾಲರಿಗೆ ಮನವಿ

    300x250 AD

    ಯಲ್ಲಾಪುರ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಪದೋನ್ನತಿಯಲ್ಲಿ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಮುಖರು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.


    ಜಿಲ್ಲೆಯಲ್ಲಿ 2017 ರಿಂದ ಈವರೆಗೆ ಕಾನ್ ಸ್ಟೇಬಲ್ ನಿಂದ ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ 169 ಸಿಬ್ಬಂದಿಗೆ ಪದೋನ್ನತಿ ನೀಡಲಾಗಿದೆ. ಅದರಲ್ಲಿ 25 ಎಸ್.ಸಿ ಹಾಗೂ 6 ಎಸ್.ಟಿಗಳಿಗೆ ಪದೋನ್ನತಿ ದೊರೆಯಬೇಕಿತ್ತು. ಆದರೆ 3 ಎಸ್.ಸಿ, 1 ಎಸ್.ಟಿ ಸಿಬ್ಬಂದಿಗೆ ಮಾತ್ರ ಪದೋನ್ನತಿ ನೀಡಲಾಗಿದೆ.


    ಹೆಡ್ ಕಾನ್ ಸ್ಟೇಬಲ್ ನಿಂದ ಎ.ಎಸ್.ಐ ಹುದ್ದೆಗೆ 148 ಜನರಿಗೆ ಪದೋನ್ನತಿಯಾಗಿದ್ದು, ಅದರಲ್ಲಿ 22 ಎಸ್.ಸಿ, 5 ಎಸ್.ಟಿ ಸಿಬ್ಬಂದಿಗೆ ನೀಡಬೇಕಿತ್ತು. ಆದರೆ ಕೇವಲ ಒಬ್ಬ ಎಸ್.ಸಿ, 3 ಎಸ್.ಟಿ. ಸಿಬ್ಬಂದಿಗೆ ಪದೋನ್ನತಿ ದೊರೆತಿದೆ. ಒಟ್ಟಾರೆ 58 ಸಿಬ್ಬಂದಿಗೆ ಪದೋನ್ನತಿ ದೊರೆಯದೇ ಅನ್ಯಾಯವಾಗಿದೆ. ಸಂವಿಧಾನಬದ್ಧವಾಗಿ ದೊರೆಯಬೇಕಾದ ಸವಲತ್ತನ್ನು ನೀಡದೇ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ. ಕೂಡಲೇ ಸಿಬ್ಬಂದಿಗೆ ಪದೋನ್ನತಿ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಸಮಿತಿಯ ಪ್ರಮುಖರು ಎಚ್ಚರಿಸಿದರು.

    300x250 AD


    ಸಮಿತಿಯ ತಾಲೂಕು ಅಧ್ಯಕ್ಷ ಕಲ್ಲಪ್ಪ ಹೋಳಿ, ಉಪಾಧ್ಯಕ್ಷ ಅಶೋಕ ಹರಿಜನ, ಕಾರ್ಯದರ್ಶಿ ಮಂಜುನಾಥ ವಾಲ್ಮೀಕಿ, ಪ್ರಮುಖರಾದ ಬಾಬು ಸಿದ್ದಿ, ಶಂಕರ ಕಾಂಬಳೆ, ಚನ್ನಪ್ಪ ಹರಿಜನ, ಮಾರುತಿ ಬೋವಿವಡ್ಡರ್, ಭೀಮಶಿ ವಾಲ್ಮೀಕಿ ಇತರರಿದ್ದರು.

    Share This
    300x250 AD
    300x250 AD
    300x250 AD
    Back to top