• first
    second
    third
    previous arrow
    next arrow
  • ಅಕ್ರಮ ಗೋವಾ ಮದ್ಯ ಮಾರಾಟ; ಆರೋಪಿ ಬಂಧನ

    300x250 AD

    ಜೋಯಿಡಾ: ಇಲ್ಲಿನ ಉಪವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಜೊಯಿಡಾ ತಾಲೂಕಿನ ಕ್ಯಾಸಲ್‍ರಾಕ್‍ನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋವಾ ಮದ್ಯವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.


    ಕ್ಯಾಸಲ್‍ರಾಕ್ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ದಾಳಿ ನಡೆಸಿದಾಗ ಆರೋಪಿ ರಾಜೇಶ ನಾಯ್ಕ ಎಂಬಾತ ಮನೆಯಲ್ಲಿ ಅಕ್ರಮವಾಗಿ ಗೋವಾ ರಾಜ್ಯದಲ್ಲಿ ತಯಾರಾದ 48 ಪ್ಲಾಸ್ಟಿಕ್ ಬಾಟಲ್180 ಮಿ. ಲೀ. ಹನಿಗೈಡ್ ಬ್ರಾಂಡಿ, 48 ಪ್ಲಾಸ್ಟಿಕ್ ಬಾಟಲಿ 180 ಮಿ.ಲೀ. ಹನಿಗ್ರೇಡ್ ಬ್ರಾಂಡಿ ಹಾಗೂ 500 ಮಿ. ಲೀ. ಕಿಂಗ್ ಫಿಶರ್ ಸ್ಟಾಂಗ್ ಬಿಯರ್ 2 ಟೀನ್‍ಗಳನ್ನು ಪತ್ತೆ ಹಚ್ಚಿ ಗೋವಾ ಮದ್ಯ ಹಾಗೂ ಬಿಯರ್‍ನ್ನು ಜಫ್ತು ಪಡಿಸಿ ಆರೋಪಿತನನ್ನು ದಸ್ತಗಿರಿ ಮಾಡಲಾಯಿತು.

    300x250 AD


    ಕಾರವಾರ ಅಬಕಾರಿ ಉಪ ಆಯುಕ್ತ ವನಜಾಕ್ಷಿ ಎಂ. ಅವರ ನಿರ್ದೇಶನದಲ್ಲಿ, ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆರ್.ವಿ. ತಳೇಕರವರ ಮಾರ್ಗದರ್ಶನದಲ್ಲಿ, ಉಪ ವಿಭಾಗದ ಅಬಕಾರಿ ನಿರೀಕ್ಷಕ ಗಣೇಶ ಎಸ್.ನಾಯ್ಕ ನೇತೃತ್ವ ವಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಪ ವಿಭಾಗದ ಉಪ ನಿರೀಕ್ಷಕ ಎಂ.ವಿ.ಜೋಗಳೇಕರ ಮತ್ತು ಉಪ ನಿರೀಕ್ಷಕ ಎಂ.ವಿ.ಜೊಗಳೇಕರ ಮತ್ತು ಅಬಕಾರಿ ಕಾನ್‍ಸ್ಟೇಬಲ್‍ಗಳಾದ ಸಿ. ಪಿ. ರಾಠೋಡ, ಅಭಿಷೇಕ ಬೋರಕರ, ಮಹಾಂತೇಶ ಹೊನ್ನೂರ, ವಾಹನ ಚಾಲಕ ಧ್ರುವರಾಜ್ ಬ್ಯಾಹಟ್ಟಿ ದಾಳಿಯಲ್ಲಿ ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Back to top