ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ನಗರದಲ್ಲಿ ರಸ್ತೆ ಅಗಲಿಕರಣ ಕಾಮಗಾರಿ, ಶಿರಸಿಯಿಂದ ಕುಮಟಾ ರಸ್ತೆ ಅಗಲೀಕರಣ, 110 ಕೆ.ವಿ ವಿದ್ಯುತ್ ಗೋಪುರ ಬದಲಾವಣೆ ಕಾಮಗಾರಿ ಹಾಗೂ 110/11 ಕೆ.ವಿ ಉಪಕೆಂದ್ರ ಶಿರಸಿಯಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ. 15, 16, 18, 20 ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನ.15 ಸೋಮವಾರದಂದು ಬೆಳಿಗ್ಗೆ 9 ರಿಂದ ಸಾಯಂಕಾಲ 6 ಘಂಟೆ ವರೆಗೆ 220 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೊಡ್ನಳ್ಳಿ, ಬಿಸಲಕೊಪ್ಪ, ಅಂಡಗಿ ಹಾಗೂ ಭಾಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನ. 16 ಮಂಗಳವಾರದಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6 ಘಂಟೆ ವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೇವನಳ್ಳಿ, ಸಂಪಖಂಡ, ಕೆಂಗ್ರೆ, ಮಾರಿಗದ್ದೆ, ತಾರಗೋಡ ಬನವಾಸಿ, ಸುಗಾವಿ, ಸಾಲ್ಕಣಿ, ಹುಲೇಕಲ್ ಹಾಗೂ ವಾನಳ್ಳಿ ಪ್ರದೇಶಗಳಲ್ಲಿ. ಹಾಗೂ ಪಟ್ಟಣ ಶಾಖೆಯ 11. ಕೆ.ವಿ ಮಾರ್ಗಗಳಾದ ಶಿರಸಿ-1, ಶಿರಸಿ-2, ಕಸ್ತೂರಬಾನಗರ, ಮಾರಿಕಾಂಬಾ ಹಾಗೂ ನಿಲೇಕಣಿ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗುವುದು.
ನ.18 ಗುರುವಾರ ದಂದು ಬೆಳಿಗ್ಗೆ 9 ರಿಂದ ಸಾಯಂಕಾಲ 6 ಘಂಟೆ ವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೇವನಳ್ಳಿ, ಸಂಪಖಂಡ, ಕೆಂಗ್ರೆ, ಮಾರಿಗದ್ದೆ, ಹುಲೇಕಲ್, ವಾನಳ್ಳಿ ಹಾಗೂ ಸಾಲ್ಕಣಿ ಪ್ರದೇಶಗಳಲ್ಲಿ ಮತ್ತು ನ.20 ಶನಿವಾರ ದಂದು ಬೆಳಿಗ್ಗೆ 9 ರಿಂದ ಸಾಯಂಕಾಲ 6 ಘಂಟೆ ವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೇವನಳ್ಳಿ, ಸಂಪಖಂಡ, ಕೆಂಗ್ರೆ, ಮಾರಿಗದ್ದೆ, ಹುಲೇಕಲ್, ವಾನಳ್ಳಿ ಹಾಗೂ ಸಾಲ್ಕಣಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.